ಮಂಗಳೂರು, ನ 09: ಟಿಪ್ಪು ಸುಲ್ತಾನ್ ಕರಾವಳಿ ಕ್ರೈಸ್ತರ ಮೇಲೆಸಗಿರುವ ದೌರ್ಜ್ಯನ ಹಾಗೂ ಹತ್ಯಾಕಾಂಡವನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಸಿನಿಮವೊಂದನ್ನು ತಯಾರಿಸಲಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ರೊಬರ್ಟ್ ರೋಜಾರಿಯೋ ಹೇಳಿದ್ದಾರೆ. ಟಿಪ್ಪು ಸಮುದಾಯದ ಮೇಲೆಸಗಿರುವ ಕ್ರೌರ್ಯ ಹಾಗೂ ಹತ್ಯೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಚಂದಾ ಎತ್ತಿ ಈ ಸಿನಿಮಾ ತಯಾರಿಸಲಾಗುವುದು ಎಂದರು ಸುದ್ದಿಗೋಷ್ಠಿ ಗುರುವಾರ ತಿಳಿಸಿದ್ದಾರೆ. ಇದೇ ವೇಳೆ ಟಿಪ್ಪು ಒಬ್ಬ ಕೂರ್ರಿಯಾಗಿದ್ದು, ಟಿಪ್ಪು ಜಯಂತಿಯನ್ನು ನಾವು 2 ವರ್ಷಗಳಿಂದ ವಿರೋಧಿಸುತ್ತಲೇ ಬಂದಿದ್ದೇವೆ.ನವೆಂಬರ್ 10 ರಂದು ಕರ್ನಾಟಕ ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಖಂಡನೀಯ ಎಂದು ಕೆನರಾ ಕೈಸ್ತ ಮುಖಂಡರು ತಿಳಿಸಿದ್ದಾರೆ. ಟಿಪ್ಪುವಿನ ಕ್ರೌರ್ಯಕ್ಕೆ ಒಳಗಾದ ಕೆನರಾ ಕ್ರೈಸ್ತರ ಸಮುದಾಯದಿಂದಲೇ ಬಂದಿರುವ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಶಾಸನ ಸಭೆಯಲ್ಲಿ ಮತ್ತು ಸಂಸತ್ತಿನಲ್ಲಿ ಇರುವ ಜೆ.ಆರ್.ಲೋಬೋ, ಐವನ್ ಡಿಸೋಜ ಮತ್ತು ಆಸ್ಕರ್ ಫೆರ್ನಾಂಡಿಸ್ ರವರು ಸಮುದಾಯದ ಜೊತೆ ನಿಲ್ಲದೆ, ಕೊಲೆಗಾರ ಟಿಪ್ಪುವನ್ನು ವಿಜೃಂಭಿಸುವ ಸರಕಾರದ ಜೊತೆ ನಿಂತಿರುವುದನ್ನು ಖಂಡನೀಯ ಎಂದರು. ಜೆರಾಡ್ ಟವರ್, ಗಿಲ್ಬರ್ಟ್ ಡಿಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.