ಮಂಗಳೂರು ನ 09: ರಾಜ್ಯ ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಳದಲ್ಲಿ ಮಾತ್ರ ನ 10 ಟಿಪ್ಪು ಜಯಂತಿ ಆಚರಿಸಲಾಗುವುದು. ಇದಕ್ಕೆ ಸಂಬಂದಪಟ್ಟಂತೆ ಇತರ ಕಾರ್ಯಕ್ರಮಗಳು ಇಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನ 9 ರ ಗುರುವಾರ ಸುದ್ದಿಗೋಷ್ಟಿ ಮಾತನಾಡಿ ಅವರು ನಗರದ ಜಿಲ್ಲಾ ಪಂಚಾಯಿತ್ ನ ನೇತ್ರಾವತಿ ಸಭಾಂಗಣ ಟಿಪ್ಪು ಜಯಂತಿ ಇತರ ಸರ್ಕಾರದ ಆಚರಣೆಗಳಂತೆ ನಡೆಯಲಿದೆ ಎಂದರು. ಇದೇ ವೇಳೆ ಮಾತನಾಡಿದ ಉಪ ಜಿಲ್ಲಾಧಿಕಾರಿ ಕುಮಾರ್, ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವರಿ ಸಚಿವ ರಮಾನಾಥ್ ರೈ ಅವರು ಉದ್ಘಾಟಿಸಲಿದ್ದು , ಚಿಂತಕ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ಮುಖ್ಯ ಅಥಿತಿಯಾಗಿ ಭಾಗವಹಿಸಲಿದ್ದಾರೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಈ ಇಬ್ಬರ ಹೆಸರುಗಳನ್ನು ಅವರ ಲಿಖಿತ ಮನವಿ ಮೇರೆಗೆ ಕೈಬಿಡಲಾಗಿದೆ ಎಂದು ತಿಳಿಸಿದರು.
ಮಂಗಳೂರು ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಕುಮಾರ್ ಮಾತನಾಡಿ, ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದ್ದು ೧೨೦೦ ಮಂದಿ ಪೊಲೀಸ್ ಸಿಬ್ಬಂದಿ ಇದಕ್ಕಾಗಿ ನಿಯೋಜನೆಗೊಂಡಿದ್ದಾರೆ ಎಂದರು.