ಬೈಂದೂರು, ಏ 07(SM): ಸಿಎಂ ಕರಾವಳಿಗರಿಗೆ ಬುದ್ದಿಯಿಲ್ಲ ಅಂತಾರೆ. ರಾಹುಲ್ ಗಾಂಧಿಯ ಕೃಪೆಯಿಂದ ಸಿಎಂ ಆಗಿದ್ದೇನೆ ಎಂದು ಹೇಳುತ್ತಾರೆ. ಪುಲ್ವಾಮಾ ಘಟನೆ ಗೊತ್ತಿತ್ತು ಎಂದು ಕೂಡ ಹೇಳ್ತಾರೆ. ಆದರೆ, ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೈಂದೂರಿನಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಲಜ್ಜೆಗೆಟ್ಟ ಬೇಜವಾಬ್ದಾರಿ ಸಿಎಂ. ಕರ್ನಾಟಕ ತಲೆತಗ್ಗಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಇಂತಹ ತುಘಲಕ್ ದರ್ಬಾರ್ ಸಿಎಂ ನಮಗೆ ಬೇಡ ಎಂದರು.
ಇನ್ನು ಬಿಜೆಪಿ ದೇಶದಲ್ಲಿ 300 ಸೀಟು ಗೆಲ್ಲುತ್ತದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ. ಕೋಲಾರ ಜಿಲ್ಲೆಯನ್ನು ನಾವು ಗೆಲ್ಲುತ್ತೇವೆ. ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಹೋಗುತ್ತಾರೆ.
ಮಂಡ್ಯದಲ್ಲಿ ಸುಮಲತಾ ಗೆ ಅವಮಾನ ಮಾಡುತ್ತಿದ್ದಾರೆ. ಆದರೆ ನಾನು ಮಂಡ್ಯದಿಂದ ಬಂದವನು. ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ ಎಂದರು.
ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿತ್ತು. ಆದರೆ ಮೋದಿ ಸರಕಾರ ದೇಶವನ್ನು ಸದೃಢ ಮಾಡಿದೆ. ರಾಹುಲ್ ಗಾಂಧಿ ಒಬ್ಬ ಬಚ್ಚಾ. ರಾಹುಲ್ ಹುಡುಗಾಟಿಕೆ ಮಾತು ಆಡುತ್ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.