ಮಂಗಳೂರು ನ 10: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೆ ಅಹಿತಕರ ಘಟನೆ ನಡೆಯದಂತೆಎಲ್ಲಾ ದ್ವಾರಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಬ್ಬರನ್ನ ತಪಾಸಣೆ ಮಾಡಿ ಬಳಿಕ ಒಳಕ್ಕೆ ಬಿಡಲಾಗುತ್ತಿದೆ. ಇದೇ ವೇಳೆ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಫ್ರಾಂಕ್ಲಿನ್ ಮೊಂತೇರೋ ಏಕಾಂಗಿಯಾಗಿ ಗುರುತು ಚೀಟಿ ತೋರಿಸದೆ ಪಂಚಾಯತ್ ಆವರಣಕ್ಕೆ ಪ್ರವೇಶಿದ ಹಿನ್ನಲೆ ಹಾಗೂ ಬಿಜೆಪಿ ಮುಖಂಡ ಎನ್ನುವ ಕಾರಣಕ್ಕೆ ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಪಂಚಾಯತ್ ಹೊರಭಾಗದಲ್ಲಿ ಗುರುತು ಚೀಟಿ ತಪಾಸಣೆ ಮಾಡಿನ ನಂತರ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಯಿತು.