ಉಡುಪಿ, ಏ 08 (MSP): ಸೋದೆ ಮಠಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಮಠದ ಆರ್ಥಿಕ ಪರಿಸ್ಥಿತಿ ಸುಧಾರಣೆ ಬಳಿಕ ಉತ್ತರಾಧಿಕಾರಿ ನೇಮಕಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಶಿರೂರು ಮಠದಲ್ಲಿ ನಡೆದ ಶಿಷ್ಯ ವರ್ಗದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಶಿರೂರು ಮಠದದ ಉತ್ತರಾಧಿಕಾರಿಯಾಗಿ ನೇಮಕವಾಗಿ ಬರುವ ವಟು ಧರ್ಮ ಪ್ರಚಾರ ಮಾಡುವುದು ಮುಖ್ಯ ಗುರಿಯಾಗಿರಬೇಕೇ ವಿನಾಃ ಕೋರ್ಟ್ ಕಚೇರಿ ಸಮಸ್ಯೆ ಕೂಪಕ್ಕೆ ಬೀಳಬಾರದು ಎನ್ನುವ ಉದ್ದೇಶದಿಂದ ಮಠದ ಉತ್ತರಾಧಿಕಾರಿ ನೇಮಕ ವಿಳಂಬವಾಗುತ್ತಿದೆ ಎಂದರು.
ಶಿರೂರು ಮಠಕ್ಕೆ ಪೂರ್ವಶ್ರಮದವರನ್ನು ಉತ್ತರಾಧಿಕಾರಿಯಾಗಿ ನೇಮಿಸುವುದಿಲ್ಲ. ಶಿರೂರು ಮಠಕ್ಕೆ ಯೋಗ್ಯ ಶಿಷ್ಯನನ್ನು ಗುರುತಿಸಿದ್ದೇವೆ ಅವರು ಸೋದೆ ಮಠದ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ವಾಂಸರಿಂದ ಪರಿಶೀಲನೆ ನಡೆಯುತ್ತಿದೆ. ಸನ್ಯಾಸ ಸ್ವೀಕರಿಸಲು ಯೋಗ್ಯರೆಂದು ಮನಗಂದ ಮೇಲೆ ನೇಮಕ ಮಾಡಲಾಗುವುದು ಎಂದು ಶೀಗಳು ಹೇಳಿದ್ದಾರೆ.