ಕಾಸರಗೋಡು,ಏ 08 (MSP): ಜಿಲ್ಲೆಯಲ್ಲಿ ತಾಪಮಾನ ಗರಿಷ್ಠ ಪ್ರಮಾಣಕ್ಕೆ ತಲುಪಿರುವ ಹಿನ್ನಲೆಯಲ್ಲಿ ಮಂಜೇಶ್ವರ ಮತ್ತು ಕಾಸರಗೋಡು ಬ್ಲೋಕ್ ವ್ಯಾಪ್ತಿಯಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಕಾರ್ಯಾಚರಿಸಲಿದೆ. ಮಂಗಳವಾರದಂದು ಮಾತ್ರ ಅಂಗನವಾಡಿ ಕಾರ್ಯಾಚರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ.
ಪ್ರತಿ ಮಂಗಳವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ರ ತನಕ ಗರ್ಭಿಣಿಯರು, ಮಕ್ಕಳಿಗೆ ಹಾಲು ಮತ್ತು ಪೋಷಕ ಆಹಾರಗಳನ್ನು ಆಯಾ ಅಂಗನವಾಡಿಗಳಲ್ಲಿ ವಿತರಿಸಲಾಗುವುದು. ಇನ್ನೊಂದು ಮಾಹಿತಿ ನೀಡುವ ತನಕ ಈ ಆದೇಶ ಜಾರಿಯಲ್ಲಿರಲಿದೆ. ಏ.23ರಂದು ಚುನಾವಣೆ ಸಂಬಂಧ ರಜೆಯಾಗಿರುವ ಹಿನ್ನೆಲೆಯಲ್ಲಿ ಆ ದಿನದ ವಿತರಣೆ ಮುಂದಿನ ಮಂಗಳವಾರ ನಡೆಸಲಾಗುವುದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.