ಸುಳ್ಯ, ಏ 08 (MSP): ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಅಧಿಕಾರ ಪಡೆಯುವುದು ಮಾತ್ರ ಅವರಿಗೆ ಗೊತ್ತು. ಈ ಚುನಾವಣೆಯಲ್ಲಿ ಮತದಾರರು ಇದಕ್ಕೆ ಬಲಿಯಾಗಬಾರದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.
ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಅಭ್ಯರ್ಥಿ ಮಿಥುನ್ ರೈ ಅವರ ಪರವಾಗಿ ಸುಳ್ಯದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಇಲ್ಲಿಯ ಯುವಕರನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆಬೆಯಿಸಿಕೊಳ್ಳುವ ಬಿಜೆಪಿಯವರ ಕಾರ್ಯವೈಖರಿಯನ್ನು ಜನ ಅರ್ಥಮಾಡಿಕೊಳ್ಳಬೇಕು. ಅನ್ಯಾಯವಾಗಿ ಬದುಕು ಹಾಳುಮಾಡಿಕೊಳ್ಳುವುದಕ್ಕೆ ಯುವಕರು ಮುಂದಾಗಬಾರದು ಎಂದು ಮುಖ್ಯಮಂತ್ರಿಗಳು ಹೇಳಿದರು. ಮಾತೆತ್ತಿದರೆ ಮೋದಿ-ಮೋದಿ ಎಂದೂ ಕೂಗುವ ಎಷ್ಟು ಮಂದಿಗೆ ಮೋದಿಯವರ ಬಗ್ಗೆ, ಅವರು ದೇಶಕ್ಕೆ ಮಾಡಿದ್ದ ತೊಂದರೆ ಬಗ್ಗೆ ತಿಳುವಳಿಕೆ ಇದೆ. ನಮ್ಮ ಮುಖನೋಡಿ ಓಟು ಹಾಕಬೇಡಿ, ಮೋದಿ ಮುಖನೋಡಿ ಓಟು ಹಾಕಿ ಎಂದು ಹೇಳಿದರು ಅದನ್ನು ಬೆಂಬಲಿಸಲು ಸಾಧ್ಯವಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಇದು ಭಾವನಾತ್ಮಕ ಚುನಾವಣೆ ಅಲ್ಲ. ಆತ್ಮಾವಲೋಕನಾ ಚುನಾವಣೆ. ದೇಶಕ್ಕೆ ದ್ರೋಹ ಮಾಡಿದ್ದ ಬಿಜೆಪಿಯನ್ನು ಜನ ತಿರಸ್ಕರಿಸಲಿದ್ದಾರೆ ಎಂದರು.
ಮಂಗಳೂರು ಲೋಕಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ, ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಉದ್ಯಮಿ ವಿಜಯವಿಠಲ ನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಅಲ್ಪಸಂಖ್ಯಾಂತ ಕಾಂಗ್ರೆಸ್ ಅಧ್ಯಕ್ಷ ಯು.ಕೆ.ಮೋನು, ಕೆಪಿಸಿಸಿ ಕಾರ್ಯದರ್ಶಿಗಳಾದ ಭರತ್ ಮಂಡೋಡಿ, ಎಂ.ವೆಂಕಪ್ಪ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕಾಂಗ್ರೆಸ್ ಮುಖಂಡರಾದ ಡಾ.ರಘು, ಎಸ್.ಸಂಶುದ್ದೀನ್, ಪಿ.ಸಿ.ಜಯರಾಮ, ದಿವ್ಯಾಪ್ರಭಾ ಚಿಲ್ತಡ್ಕ, ಕೆ.ಕೆ.ಹರಿಪ್ರಸಾದ್, ಸಿದ್ದೀಕ್ ಕೊಕ್ಕೋ, ಗೀತಾ ಕೋಲ್ಚಾರ್, ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಜಿಲ್ಲಾ ಯುವಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ,ಜೆಡಿಎಸ್ ಮುಖಂಡರಾದ ಎಂ.ಬಿ.ಸದಾಶಿವ, ಜಾಕೆ ಮಾದವ ಗೌಡ, ಸೈಯದ್ ಮೀರಾಸಾಹೇಬ್, ಹೈದರ್ ಪರ್ತಿಪ್ಪಾಡಿ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಜ್ಯೋತಿಪ್ರೇಮಾನಂದ, ರಾಕೇಶ್ ಕುಂಟಿಕಾನ, ದಯಾಕರ ಆಳ್ವ, ಸುಮತಿ ಹೆಗ್ಡೆ ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿದರು. ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮತ್ತು ಕಾಂಗ್ರೆಸ್ ಮುಖಂಡ ಗೋಕುಲ್ದಾಸ್ ಕಾರ್ಯಕ್ರಮ ನಿರೂಪಿಸಿದರು.
.