ಮೂಡಬಿದಿರೆ, ನ 11: ಅನೇಕ ಕಂಟಕಗಳ ನಂತರ ಸವಾಲುಗಳನ್ನು ಮೆಟ್ಟಿ ಮತ್ತೇ ಕರ್ನಾಟಕದ ಕರಾವಳಿಯಲ್ಲಿನ ಕಂಬಳಕ್ರೀಡೆಗೆ ಜಯ ಸಿಕ್ಕಿದೆ. ಮೂಡಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಇಂದು ನಡೆಯಲಿದ್ದು, ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ವೈಭವದಿಂದ ನಡೆಯಲಿದೆ.
ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ಮೂಡಬಿದಿರೆಯಲ್ಲಿ ನಡೆಯುವ ಮೊದಲ ಕಂಬಳ ಇದಾಗಿದೆ. ಇಲ್ಲಿನ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಪ್ರತೀ ವರ್ಷ ಪಾಲ್ಗೊಳ್ಳುವ ಕೋಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಾರಿ 200 ರಷ್ಟು ಜತೆ ಕೋಣಗಳು ಕಂಬಳದಲ್ಲಿ ಪಾಲು ಪಡೆಯುವ ನಿರೀಕ್ಷೆ ಇದೆ.
ಒಂದು ವರ್ಷ 8 ತಿಂಗಳುಗಳ ನಂತರ ಮತ್ತೇ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸುತ್ತಿರುವುದು ಮೂಡಬಿದಿರೆಯ ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಕಂಬಳ ಸ್ಪರ್ಧೆಗೆ ಕೋಣಗಳನ್ನು ರಿಯಾಜು ಮಾಡಿಸುವ ಕೌತುಕದ ಕಾರ್ಯನಿರ್ವಹಣೆಯೂ ಈಗಾಗಲೇ ಮೂಡಬಿದಿರೆಯಲ್ಲಿ ನಡೆದಿದ್ದು, ಸಕಲ ಸಿದ್ಧತೆಗಳು ಜರುಗಿದೆ.