ಮಂಗಳೂರು, ನ 11: ಜಿಎಸ್ಟಿ ದರವನ್ನು ಶೇ.5ಕ್ಕೆ ತಗ್ಗಿಸಿರುವುದು ಹೋಟೆಲ್ ಮತ್ತು ರೆಸ್ಟೊರೆಂಟ್ನವರಿಗೆ ಖುಷಿಯನ್ನು ತಂದುಕೊಟ್ಟಿದೆ. ಹೋಟೆಲ್ ಮಾಲೀಕರ ಸಂಘಟನೆ ಇದನ್ನು ಸ್ವಾಗತಿಸಿದ್ದು, ಜನರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದಿಲ್ಲ ಎಂದು ತಿಳಿಸಿದೆ.
ಜಿಎಸ್ಟಿ ದರ ಇಳಿದಿರುವುದರಿಂದ ನಮ್ಮ ಬೇಡಿಕೆಯೂ ಈಡೇರಿದಂತಾಗಿದೆ. ಇದರ ಪ್ರಯೋಜನವನ್ನು ರೆಸ್ಟೊರೆಂಟ್ ಮತ್ತು ಹೋಟೆಲ್ಗಳು ಗ್ರಾಹಕರಿಗೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೊರೆಂಟ್ ಅಸೋಸಿಯೇಷನ್ನ ಅಧ್ಯಕ್ಷ ರಾಜೇಂದ್ರ ತಿಳಿಸಿದ್ದಾರೆ.
ಜಿಎಸ್ಟಿ ದರದಿಂದ ಉದ್ಯಮಕ್ಕೆ ಸಾಕಷ್ಟೂ ಹೊಡೆತ ಬಿದ್ದಿತ್ತು. ಜಿಎಸ್ಟಿಯನ್ನು ಶೇ.5ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಸರಕಾರದ ಮಹತ್ವದ ನಿರ್ಧಾರದಿಂದ ಹೋಟೆಲ್ ಉದ್ದಿಮೆದಾರರಿಗೆ ಸಮಾಧಾನ ತಂದಿದೆ. ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಅವರು ಹೇಳಿದ್ದಾರೆ.