ಮಂಗಳೂರು,ಏ 11 (MSP): ಮಂಗಳೂರು ಪೊಲೀಸ್ ಕಮಿಷನರೇಟ್ ನ ಅಪರಾಧ ಮತ್ತು ಸಂಚಾರ ವಿಭಾಗದ ನೂತನ ಪೊಲೀಸ್ ಉಪ ಆಯುಕ್ತರಾಗಿ ಲಕ್ಷ್ಮೀ ಗಣೇಶ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಉಮಾ ಪ್ರಶಾಂತ್
ಮೂಲತಃ ಕೋಲಾರದ ನಿವಾಸಿಯಾಗಿರುವ ಅವರು 2010 ನೇ ಬ್ಯಾಚಿನ ಕೆ.ಎಸ್.ಪಿ.ಎಸ್ ಅಧಿಕಾರಿ. ಬೆಂಗಳೂರಿನ ಲೋಕಾಯುಕ್ತ ವಿಭಾಗದಲ್ಲಿ ಪೊಲೀಸ್ ಅಧೀಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಇಲಾಖೆಯ ವಿವಿಧ ಜವಬ್ದಾರಿ ನಿರ್ವಹಿಸಿದ್ದರು. ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಎಸಿಬಿ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಲಕ್ಷ್ಮೀ ಗಣೇಶ್ ನೇಮಕಗೊಂಡಿದ್ದಾರೆ.