ಬಂಟ್ವಾಳ, ನ 11: ಮುಸ್ಲಿಮರ ಸುನ್ನತ್ ನಿಷೇಧ ಮಾಡಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಬಂಟ್ವಾಳದಲ್ಲಿ ನಡೆದ ನವಕರ್ನಾಟಕ ಪರಿವರ್ತನಾ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಮೂಢನಂಬಿಕೆ ನಿಷೇಧದ ಹೆಸರಿನಲ್ಲಿ ಹಿಂದೂಗಳ ನಂಬಿಕೆಯನ್ನು ನಿಷೇಧಿಸಲು ಹೊರಟಿದೆ. ಆದರೆ ರಾಜ್ಯ ಸರ್ಕಾರ ಮುಸ್ಲಿಮರ ಸುನ್ನತ್ ನಿಷೇಧಿಸುತ್ತಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಮುಸ್ಲಿಮರ ಸುನ್ನತ್ ನಿಷೇಧಿಸುತ್ತಾರೆ ಎಂದು ಹೇಳಿದರು.
ಮತ್ತೇ ಮುಂದುವರೆದು ಮಾತನಾಡಿದ ಅವರು ನನ್ನ ಮೈಯಲ್ಲಿ ಕನಕದಾಸರ ರಕ್ತ ಹರಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎಂದು ಟೀಕಿಸಿದರು.