ಮಂಗಳೂರು, ಏ 11(SM):ತನ್ನ ಸೋಲನ್ನು ಕಾಂಗ್ರೆಸ್ ಪಕ್ಷ ಹಲವು ಬಾರಿ ಬರೆಸಿಕೊಂಡಿದೆ. ಕಾಂಗ್ರೆಸ್ ಪ್ರಣಾಳಿಕೆ ದೇಶ ವಿರೋಧಿಯಿಂದ ಕೂಡಿದೆ ಎಂದು ಟೀಂ ಮೋದಿ ಮುಂದಾಳು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಮ್ಡ್ ಫೋರ್ಸ್ ಕಾಯ್ದೆ ತೆಗೆದುಬಿಡಲು ಕಾಂಗ್ರೆಸ್ ಮುಂದಾಗಿದೆ. ‘ನ್ಯಾಯ್’ ಹಗಲುಗನಸು ಕಾಣುವ ಯೋಜನೆಯಾಗಿದೆ. ‘ನ್ಯಾಯ್’ ಪ್ರಾಯೋಗಿಕವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಕಾಂಗ್ರೆಸ್ ನವರಿಗೆ ಈ ವಿಚಾರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದರು.
ನರೇಂದ್ರ ಮೋದಿ ಬಂದರೆ ಶಾಂತಿ ಮಾತುಕತೆಗೆ ಸಾಧ್ಯ ಎಂಬ ಇಮ್ರಾನ್ ಖಾನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವರು ಪ್ರತಿಪಕ್ಷಗಳಿಗೆ ಸಹಾಯವಾಗಲೆಂದು ಮಾತನಾಡಿರುವ ಸಾಧ್ಯತೆ ಇದೆ. ಅಥವಾ ಅವರೇ ಮಾತಾಡಿಸಿರೋ ಸಾಧ್ಯತೆ ಇದೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದ್ದಾರೆ.