ಬೆಳ್ತಂಗಡಿ, ಏ 13(MSP) : ಪ್ರಧಾನಿ ಕಾರ್ಯಕರ್ಮದಲ್ಲಿ ಬೆಳ್ತಂಗಡಿ ತಾಲೂಕಿನಿಂದ ಒಂದು ಸಾವಿರ ಮಂದಿ ಚೌಕಿದಾರಂತೆ (ಕಾವಲುಗಾರ) ಖಾಕಿ ಸಮವಸ್ತ್ರ ಧರಿಸಿ ಭಾಗವಹಿಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಚೌಕಿದಾರ್ ಎಂಬ ಪದ ದೊಡ್ಡ ಸಂಚನವನ್ನೇ ಉಂಟುಮಾಡಿದೆ. ನಾನು ನಿಮ್ಮ ಕಾವಲುಗಾರ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ರಾಜಕೀಯ ಆರೋಪ -ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಜೆಪಿಯವರು ಮೇ ಭೀ ಚೌಕಿದಾರ್ ಎಂಬ ಘೋಷಣೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಧಾನಿ ಕಾರ್ಯಕ್ರಮ ಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದ ಕಾರ್ಯಕರ್ತರಲ್ಲಿ ಮನವಿ ಮಾಡಿದಾಗ ಈ ರೀತಿಯಲ್ಲಿ ಖಾಕಿ ವಸ್ತ್ರಧಾರಿಗಳಾಗಿ ಸ್ವಂತ ಖರ್ಚಿನಿಂದ ಬಟ್ಟೆ ಹೊಲಿಸಿಕೊಂಡು ಸ್ವ ಇಚ್ಚೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅಂಗಿಯ ಹಿಂಬದಿಯಲ್ಲಿ ಹಾಗೂ ಟೋಪಿಯಲ್ಲಿ ಮೇ ಭೀ ಚೌಕಿದಾರ್ ಎಂದು ಬರೆಯಲಾಗಿದೆ ಎನ್ನುತ್ತಾರೆ ಶಾಸಕ ಹರೀಶ್ ಪೂಂಜಾ
ಇನ್ನು ಮೋದಿ ಪ್ರಧಾನಿಯಾದ ಬಳಿಕ ನಗರಕ್ಕೆ ಐದನೇ ಬಾರಿ ಮಂಗಳೂರು ಭೇಟಿಯಾಗಿದೆ. ಸಾರ್ವಜನಿಜ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.