ಕಾಪು,ನ.೧೨: ರಾಜ್ಯಾದ್ಯಾಂತ ಸಂಚರಿಸುತ್ತಿರುವ ಬಿಜೆಪಿಯ ಪರಿವರ್ತನ ರಥ ಯಾತ್ರೆ ಇಂದು ಉಡುಪಿ ಜಿಲ್ಲೆ ಪ್ರವೇಶಿಸಿದೆ. ಉಡುಪಿಯ ಗಡಿಭಾಗದ ಹೆಜಮಾಡಿಗೆ ಬಂದ ಯಡಿಯೂರಪ್ಪ ಅವರಯನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಹೆಜಮಾಡಿಯಿಂದ ಕಾಪುವಿನ ವರೆಗೆ ಪರಿವರ್ತನ ರಥ ಯಾತ್ರೆ ಸಾಗಿ ಬಂತು. ಕಾಪು ಮುಖ್ಯ ಪೇಟೆಯಲ್ಲಿ ಆಯೋಜಿಸಲಾದ ಪರಿವರ್ತನ ಯಾತ್ರೆಯ ಸಭಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಧ್ಯಾಕ್ಷ ಯಡಿಯೂರಪ್ಪ ಉದ್ಘಾಟಿಸಿದರು.
ರಥ ಯಾತ್ರೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಭ್ರಷ್ಟ ಸರಕಾರ. ಸಿ ಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರದ ಭ್ರಷ್ಟ ರಾಜಕಾರಣಿ. ಇಗಾಗಲೇ ಸಿ ಎಂ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿ ಮಂಡಲದ ಮಂತ್ರಿಗಳ ಭ್ರಷ್ಟಾಚಾರದ ಆಡಳಿತದ ಬಗ್ಗೆ ಜನರ ಅರಿವಿಗೆ ಬಂದಿದೆ. ಇನ್ನೂ ಬಿ ಜೆಪಿ ಸರಕಾರ ತನ್ನ ಆಡಳಿತ ಸಂದರ್ಭ ಕಾಪುವಿನ ಸಮಗ್ರ ಅಭಿವೃದ್ದಿಗೆ ಹಗಲಿರುಳು ಪ್ರಯತ್ನ ನಡೆಸಿದೆ. ಆದರೆ ಕಾಂಗ್ರೆಸ್ ಸರಕಾರದಿಂದ ಕಾಪುವಿನ ಅಭಿವೃದ್ದಿಗೆ ಸಮರ್ಪಕ ಅನುದಾನ ಕೂಡಾ ಸಿಕ್ಕಿಲ್ಲ. ಕಾಪು ತಾಲೂಕಾಗಿ ಘೋಷಣೆಯಾದರು ಅದರ ಸಮರ್ಪಕ ಅನುಷ್ಠಾನ ಆಗಿಲ್ಲ. ಕೇಂದ್ರ ಸರಕಾರದಿಂದ ಬಂದಿರುವ ಅನುದಾನಗಳು ಕಾಪುವಿನ ಅಭಿವೃದ್ದಿಗೆ ಬಳಕೆಯಾಗುತ್ತಿದೆ ವಿನಃ ರಾಜ್ಯಸರಕಾರದಿಂದ ಯಾವ ಅನುದಾನ ಸಿಕ್ಕಿಲ್ಲ. ಈ ಹಿಂದೆ ಬಿಜೆಪಿ ಆಡಳಿತ ಜಾರಿಗೆ ತಂದಿರುವ ಎಲ್ಲಾ ಕಾಮಗಾರಿಗಳ ಶಂಕು ಸ್ಥಾಪನೆ ಇಂದಿನ ಶಾಸಕರು ನೇರೆವೇರಿಸುತ್ತಿದ್ದಾರೆ ವಿನಃ ಶಾಸಕರ ಮುತುವರ್ಜಿಯಿಂದ ಕಾಮಗಾರಿ ನಡೆದಿಲ್ಲ. ರಾಜ್ಯದಲ್ಲಿ ಬದಲಾವಣೆಯಾಗಬೇಕಾಗಿದೆ. ಭಷ್ಟಚಾರ ಆಡಳಿತವನ್ನು ನಡೆಸುವ ಕಾಂಗ್ರೆಸ್ನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದವರು ಹೇಳಿದ್ದಾರೆ. ಇದೇ ಸಂದರ್ಭ ಬಿಜೆಪಿ ನಾಯಕರು ರಾಜ್ಯ ಸರಕಾರದ ಆಡಳಿತ ವೈಪಲ್ಯದ ವಿರುದ್ದ ಮತ್ತು ಸಿ ಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.