ಮಂಗಳೂರು, ಎ13(SS): ಮೋದಿ ಅಭಿಮಾನಿ ಜತೆಗೆ ಬಿಜೆಪಿ ಕಾರ್ಯಕರ್ತರೂ ಆಗಿರುವ ನಗರ ನಿವಾಸಿಯೋರ್ವರು ತಾವು ಕಟ್ಟಿಸಿದ ಹೊಸ ಮನೆಗೆ 'ನಮೋ' ಎಂದೇ ಹೆಸರಿಟ್ಟಿದ್ದಾರೆ.
ಮಂಗಳೂರು ನಗರದ ಯೆಯ್ಯಾಡಿ ನಿವಾಸಿ ಕಿಶೋರ್ ಹೊಸ ಮನೆಗೆ ನಮೋ ಎಂದು ಹೆಸರಿಟ್ಟಿರುವ ಮೋದಿ ಅಭಿಮಾನಿ. ಕದ್ರಿಯಲ್ಲಿ ಟೈಲ್ಸ್ ಕಂಪನಿಯ ಉದ್ಯೋಗಿಯಾಗಿರುವ ಕಿಶೋರ್ ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೋದಿಯ ಮೇಲೆ ಅಪಾರ ಪ್ರೀತಿಯಿರುವ ಕಿಶೋರ್ ಯೆಯ್ಯಾಡಿಯ ಸಮೀಪ ಹೊಸ ಮನೆಯನ್ನು ನಿರ್ಮಿಸಿದ್ದು, ತಮ್ಮ ಮನೆಗೆ 'ನಮೋ' ಎಂದು ಹೆಸರಿಟ್ಟಿದ್ದಾರೆ. ನಮೋ ಹೆಸರನ್ನು ಮನೆಯ ಮುಂಭಾಗದ ಗೋಡೆಯಲ್ಲಿ ಅಳವಡಿಸಲಾಗಿದೆ.
ವಿಶೇಷವೆಂದರೆ ಕಿಶೋರ್ ಹೊಸ ಮನೆಯ ಗೃಹ ಪ್ರವೇಶವನ್ನು ಕೂಡ ಮೋದಿ ಮಂಗಳೂರಿಗೆ ಬರುವ (ಎ.13) ದಿನವೇ ನೆರವೇರಿಸಿದ್ದಾರೆ.