ಬೆಳ್ತಂಗಡಿ, ನ 12 : ಪ್ರಕೃತಿ ವೈಚಿತ್ರ್ಯ ಅಂದರೆ ಇದೇ ಇರಬೇಕು. ದಯನೀಯ ಸ್ಥಿತಿಯಲ್ಲಿರುವ ಶತ್ರುಗಳಿಗೆ ಕರುಣೆ ತೋರಿಸಿ ಎನ್ನುವುದು ಮಾನವೀಯ ನೆಲೆಯ ಮಾತು..ಆದರೆ ಪ್ರಾಣಿಗಳ ಜಗತ್ತಿನಲ್ಲಿ ಇದ್ಯಾವುದು ಇಲ್ಲ. ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅನ್ನೋದನ್ನು ಮರೆತು ಬೆಕ್ಕೊಂದು ನಾಯಿ ಮರಿಗಳಿಗೆ ತಾಯಿಯ ಪ್ರೀತಿ ತೋರಿಸುತ್ತಿದೆ. ಇಂತಹ ಅಪರೂಪದ ಘಟನೆ ನಡೆದಿದ್ದು ಬೆಳ್ತಂಗಡಿಯ ಸೋಮಂತಡ್ಕ ನಿವಾಸಿ ಮೋಹನ್ ನಾಯ್ಕ್ ಎಂಬವರ ಮನೆಯಲ್ಲಿ. ಅವರು ಸಾಕಿದ ಬೆಕ್ಕು ಪ್ರತಿದಿನ ಬೆಳಗ್ಗೆ ನಾಯಿಮರಿಗಳಿಗೆ ಹಾಲು ನೀಡುತ್ತಿದೆ. ತಾಯಿಯ ಮಮತೆಯನ್ನು ಬಯಸಿ ಬರುವ ಸುಮಾರು 5 ರಿಂದ 6 ನಾಯಿ ಮರಿಗಳಿಗೆ ತಾಯಿಯ ಪ್ರೀತಿ ತೋರಿಸುತ್ತಾ, ನಾಯಿ ಮರಿಗಳು ಹತ್ತಿರ ಬಂದ ತಕ್ಷಣ ಮಲಗಿ ಹಾಲನ್ನು ನೀಡುತ್ತದೆ. ಇದು ಮನೆಯವರ ಮತ್ತು ಊರಿನವ ಅಚ್ಚರಿಗೆ ಕಾರಣವಾಗಿದೆ.