ಉಡುಪಿ, ಏ 13(SM): "ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತವನ್ನು ಮೋದಿ ಮುಕ್ತ ರಾಷ್ಟ್ರ ಮಾಡಬೇಕು. ಯಾಕೆಂದರೆ, ಪ್ರಜಾಪ್ರಭುತ್ವವವನ್ನು ಉಳಿಸುವುದು ಕರ್ತವ್ಯ. ಸಂವಿಧಾನದ ಸಂಸ್ಥೆಯಾದ ಐಟಿ, ಸಿಬಿಐ, ನ್ಯಾಯಾಂಗವನ್ನು ದುರುಪಯೋಗ ಪಡಿಸುತ್ತಿದ್ದಾರೆ. ಸಾಂವಿಧಾನ ಸಂಸ್ಥೆ ಹಸ್ತಕ್ಷೇಪ ಮಾಡುತ್ತಿರುವುದನ್ನು ಜೆಡಿಎಸ್ ಖಂಡಿಸುತ್ತದೆ ಎಂದು ಎಮ್ಎಲ್ಸಿ ಭೋಜೆಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಂಸದೆ ಉಡುಪಿಯ ಜನರನ್ನು ಸಂಪರ್ಕಿಸಲು ಉಡುಪಿಯಲ್ಲಿ ಒಂದು ಸ್ವಂತ ಮನೆಯನ್ನು ಕಟ್ಟಿಕೊಂಡಿಲ್ಲ. ಅವರಿಗೆ ಜನರೊಂದಿಗೆ ಬೆರೆಯಲು ಆಗಿಲ್ಲ. ಹಾಗಾಗಿ ಜನರು ಅವರನ್ನು ಸೋಲಿಸಬೇಕು. ಪ್ರಮೋದ್ ಅವರಿಗೆ ಜನ ಆಶೀರ್ವಾದ ಮಾಡಲಿ. ರೈತರ ಸಾಲ ಮನ್ನಾ ಮಾಡಲು 45000 ಕೋಟಿ ರೂಪಾಯಿಯನ್ನು ಘೋಷಣೆ ಮಾಡಿದೆ. ಒಂಬತ್ತುವರೆ ತಿಂಗಳ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ ಎಂದರು.
ಜಿಎಸ್ ಟಿ ಮತ್ತು ಆಧಾರ್ ಎರಡು ಕಾಂಗ್ರೆಸ್ ನ ಕೂಸು. ಮೋದಿಯವರು ಅದನ್ನ ಜಾರಿಗೆ ತಂದಾಗ ಅದು ಆರ್ಥಿಕ ಕ್ರಾಂತಿ, ಅದನ್ನೇ ಮನಮೋಹನ್ ಸಿಂಗ್ ಅವರು ಜಾರಿಗೆ ತಂದಾಗ ಅದು ಆರ್ಥಿಕ ದಿವಾಳಿತನ ಆಗುವ ನೀತಿ ಎಂದು ಆರೋಪಿಸಿದ್ದಾರೆ. ಯಾರೋ ಹುಟ್ಟಿಸಿದ ಮಕ್ಕಳಿಗೆ ಬಟ್ಟೆ ಹೊಲಿಸಿ ನಾಮಕರಣ ಮಾಡಿದರೆ ಆಗಲ್ಲ. ನಿಮ್ಮ ಮಕ್ಕಳನ್ನು ಹುಟ್ಟಿಸಿ ನಾಮಕರಣ ಮಾಡಿ. ಕೇವಲ ಹೆಸರು ಬದಲಾವಣೆ ಮಾಡಿದ್ದರೆ ಅವರ ಯೋಜನೆ ಆಗುತ್ತಾ? ಎಂದು ಭೋಜೆಗೌಡ ಟೀಕಿಸಿದರು.