ಮಂಗಳೂರು, ಏ 15 (MSP): ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಏ.13ರ ಶನಿವಾರ ನಗರದ ಕೇಂದ್ರ ಮೈದಾನದಲ್ಲಿ ಬಿಜೆಪಿಯ ಸಂಕಲ್ಪ ರ್ಯಾಲಿ ಮೋದಿ ಸಮಾವೇಶವನ್ನು ಟೀಕಿಸುವ ಭರದಲ್ಲಿ ಫೇಸ್ ಬುಕ್ ನಲ್ಲಿ ದೇಶದ್ರೋಹಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದಕ್ಕೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಬಿಜೆಪಿ ರ್ಯಾಲಿ ಪೋಟೋ ಒಂದನ್ನು ಪೋಸ್ಟ್ ಮಾಡಿ, ಅದಕ್ಕೆ ಅಡಿಬರಹವಾಗಿ" ಭಯೋತ್ಪಾದನೆ ನಡೆಸದ ಪಾಕಿಸ್ತಾನದ ಗುಡ್ಡದ ಮೇಲೆ ಇರುವ ಮರಗಳ ಮೇಲೆ 1 ಸಾವಿರ ಕೆಜಿ ಬಾಂಬ್ ಹಾಕುವ ಬದಲು ನಮ್ಮ ಸೇನೆ , ಮಂಗಳೂರಿನಲ್ಲಿ ನಡೆದ ಮೋದಿ ಸಮಾವೇಶದಲ್ಲಿ 2 ಕೆಜಿ ಬಾಂಬ್ ಹಾಕಿದ್ರೂ ಸಾಕಿತ್ತು. ದಕ್ಷಿಣ ಕನ್ನಡ 50 ವರ್ಷ ನೆಮ್ಮದಿಯಾಗಿ ಇರುತ್ತಿತ್ತು" ಎಂದು ಭಯೋತ್ಪಾದನೆ ಪ್ರೇರಿತ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಈ ದೇಶದ್ರೋಹಿ ಪೋಸ್ಟ್ ನ್ನು ಯುವತಿಯೊಬ್ಬಳ ಹೆಸರಿರುವ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು ಭಾನುವಾರ ಸಂಜೆ 3.30ಕ್ಕೆ ಹಾಕಲಾಗಿದ್ದು ಪ್ರೊಫೈಲ್ನಲ್ಲಿ ಊರು ಉಡುಪಿ ಎಂದು ಬರೆದುಕೊಂಡಿದ್ದಾರೆ. ಫೇಸ್ಬುಕ್ ನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ, ಈ ಪೋಸ್ಟ್ ಹಾಕಿರುವ ಸಾಧ್ಯತೆ ಹೆಚ್ಚಿದ್ದು ಪೊಲೀಸ್ ತನಿಖೆಯಿಂದ ಸತ್ಯ ವಿಚಾರ ಬರಬೇಕಿದೆ. ಈ ಪೋಸ್ಟ್ ವಿರುದ್ದ ಸಾರ್ವಜನಿಕರಿಂದ ಆಕ್ರೋಶದ ಕಮೆಂಟ್ ಗಳು ವ್ಯಕ್ತವಾಗಿದೆ.