ಬೆಳ್ತಂಗಡಿ, ಏ 15(SM): ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಡುಮನೆ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ರೆಂಕೆದಗುತ್ತು ನಿವಾಸಿ ಕಿರಣ್ ಶೆಟ್ಟಿ(32) ಹಾಗೂ ಲಾಲ ಪುತ್ರಬೈಲು ನಿವಾಸಿ ಸಂಗೀತ(20) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಿರಣ್ ಎಂಬುವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೂಡಿಗೆರೆ ಬಣಕಲ್ ನಿವಾಸಿ ಲವೀನ ಎಂಬಾಕೆಯನ್ನು ಪ್ರೇಮಿಸಿ ವಿವಾಹವಾಗಿದ್ದರು. ಈ ಹಿಂದೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿ ಬಳಿಕ ವಿಚ್ಚೇದನ ಪಡೆದುಕೊಂಡಿದ್ದರು. ಇದೀಗ ಇನ್ನೊಬ್ಬ ಯುವತಿ ಸಂಗೀತ ಎಂಬಾಕೆಯನ್ನು ಪ್ರೇಮಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದರಿಂದ ಪರಸ್ಪರ ಕುಟುಂಬದೊಳಗೆ ಕಲಹಗಳು ನಡೆಯುತ್ತಿದ್ದು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಕಿರಣ್ ಮನೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಇತ್ತೀಚೆಗೆ ಸಹೋದರಿಯ ಮದುವೆಯಾಗಿದ್ದು ಮದುವೆ ದಿನ ಮಾತ್ರ ಮನೆಗೆ ಹೋಗಿದ್ದ ಉಳಿದಂತೆ ಪ್ರತ್ಯೇಕವಾಗಿಯೇ ವಾಸವಾಗಿದ್ದ ಈತ ಕಳೆದ ಎರಡು ತಿಂಗಳ ಹಿಂದೆ ಬಣಕಲ್ ನಿವಾಸಿ ಲವಿನಾ ಎಂಬಕೆಯನ್ನು ವಿವಾಹವಾಗಿದ್ದು ಬೆಳ್ತಂಗಡಿ ನಗರ ವ್ಯಾಪ್ತಿಯ ನಡುಮನೆ ಎಂಬಲ್ಲಿ ಬಾಡಿಗೆ ರೂಮ್ನಲ್ಲಿ ವಾಸವಾಗಿ ಮದುವೆಯಾದ ಬಳಿಕ ಲಾಲ ಪುತ್ರಬೈಲು ನಿವಾಸಿ ಸಂಗೀತ ಎಂಬವರನ್ನು ಪ್ರೀತಿಸಿದ್ದು ಈಕೆಯನ್ನು ಮದುವೆಯಾಗುವ ಸಂಚು ರೂಪಿಸಿದ್ದ ಆದರೆ ಈತನ ಎರಡನೇ ಪತ್ನಿ ಇದಕ್ಕೆ ವಿರೋಧ ಮಾಡಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.