ಚಾಮರಾಜನಗರ, ನ 13 : ಸಿನಿಮಾ ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ಮೈಸೂರು ಮಹಾರಾಜರು ತಲೆತೂಗಿದ್ದಾರೆ. ಹೊಸ ವಿಚಾರಧಾರೆಗಳಿರುವ ಪಕ್ಷ ಕರ್ನಾಟಕ ರಾಜ್ಯಕ್ಕೆ ಅವಶ್ಯವಿದ್ದು ಆ ಹೊಸ ಆಲೋಚನೆಯನ್ನು ಉಪೇಂದ್ರ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಳ್ಳೆಗಾಲ ತಾಲೂಕಿನ ಕುರುಬರಕಟ್ಟೆ ಗ್ರಾಮದಲ್ಲಿ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠದ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು ಉಪೇಂದ್ರ ಅವರು ಇಂಡಿಪೆಂಡೆಟ್ ಆಗಿ ಪ್ರಜಾಕೀಯ ಪಕ್ಷ ಕಟ್ಟಿದ್ದು ಒಳ್ಳೆದಾಯಿತು. ಹೊಸ ಆಲೋಚನೆಗಳಿರುವ ಪ್ರಾದೇಶಿಕ ಪಕ್ಷದಿಂದ ಕರ್ನಾಟಕಕ್ಕೆ ಲಾಭವಿದೆ ಎಂದು ತಿಳಿಸಿದರು. ಇದೇ ವೇಳೆ ತಮಗೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.