ಪಡುಬಿದ್ರಿ, ನ 14: ಗಾಳಿ ಯಂತ್ರ ತಯಾರಿಸುವ ಸಂಸ್ಥೆಯಾದ ಸುಜ್ಲಾನ್ ಕಂಪನಿ ವ್ಯವಹಾರಿಕ ಸಂಕಷ್ಟದ ಕಾರಣ ನೀಡಿ ಸೋಮವಾರ ಮದ್ಯರಾತ್ರಿ ತನ್ನ ಕಂಪನಿಗೆ ಬೀಗಜಡಿದಿದೆ. ಆದರೆ ಇಲ್ಲಿನ ಕಾರ್ಮಿಕರಿಗೆ ಯಾವುದೇ ಮುನ್ಸೂಚ್ಸನೆ ನೀಡದೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರನ್ನು ಹೊರಕ್ಕೆ ಕಳುಹಿಸಿ ಲಾಕೌಟ್ ಮಾಡಿದ್ದಾರೆ. 326 ಕಂಪನಿ ಕಾರ್ಮಿಕರ ಸಹಿತ ಸುಮಾರು 600 ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಂಪನಿಯ ಈ ನಿರ್ಧಾರದಿಂದ ಕೆಲಸಗಾರ ಬದುಕು ಇದೀಗ ಅತಂತ್ರವಾಗಿದೆ. ಬೆಳಗಾಗುತ್ತಿದ್ದಂತೆ ಕಾರ್ಮಿಕರೆಲ್ಲರೂ ಸುಜ್ಲಾನ್ ಕಂಪನಿಯ ಗೇಟ್ ಮುಂದೆ ಜಮಾಯಿಸಿ ತಮ್ಮ ಮುಂದಿನ ನಿರ್ಧಾರದ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಇನ್ನು ಕಳೆದ 15 ದಿನಗಳ ಹಿಂದೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ 120 ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.