ತೆಲಂಗಾಣ : ಪೊಲೀಸ್ ಸ್ಟೇಷನ್ನೇ ಮಸಾಜ್ ಪಾರ್ಲರ್ ಆದಾ ವಿಡಿಯೋ ವೈರಲ್ ಆಗಿದ್ದು ಈ ಘಟನೆ ತೆಲಂಗಾಣದಲ್ಲಿ ನಡೆದಿದೆ ಎನ್ನಲಾಗಿದೆ. ಸಮವಸ್ತ್ರ ತೆಗೆದಿರುವ ಅಧಿಕಾರಿ ಮಲಗಿದ್ದು, ಆತನಿಗೆ ಲೇಡಿ ಪೊಲೀಸ್ ಮಸಾಜ್ ಮಾಡಿದ್ದಾರೆ. ಖಾಕಿ ಸಮವಸ್ತ್ರದಲ್ಲಿ ಮಸಾಜ್ ಮಾಡುತ್ತಿರುವ ಮಹಿಳೆಯನ್ನು ಗೃಹ ರಕ್ಷಕ ದಳದ ಸಿಬ್ಬಂದಿ ಎಂದು ಗುರುತಿಸಲಾಗಿದೆ.ಇನ್ನು ಈ ಮಸಾಜ್ ಮಾಡಿಸಿಕೊಂಡ ಅಧಿಕಾರಿಯನ್ನು ಗಡ್ವಾಲ್ ನ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಹಾಸನ್ ಎಂದು ತಿಳಿದು ಬಂದಿದ್ದು, ಘಟನೆ ಗಮನಕ್ಕೆ ಬರುತ್ತಲೇ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.ಜಿಲ್ಲಾ ಮುಖ್ಯ ಕಚೇರಿಯಲ್ಲಿ ಸಶಸ್ತ್ರ ಮೀಸಲು ಪೊಲೀಸ್ ನಲ್ಲಿ ಎ ಎಸ್ ಐ ಆಗಿರೋ ಹಸನ್ , ಕ್ಯಾಂಪಸ್ ಒಳಗಿನ ರೂಮಿನಲ್ಲೇ ಹೋಮ್ ಗಾರ್ಡ್ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ರೀತಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದು ಇದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಬಹಿರಂಗಪಡಿಸಿದ್ದಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಂ ವಿಜಯ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಇನ್ನು ಈ ಹಿಂದೆಯೂ ಇಂತಹ ಘಟನೆ ನಡೆದುದ್ದು ಹೈದರಾಬಾದ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗೃಹ ರಕ್ಷಕ ದಳದ ಪುರುಷ ಸಿಬ್ಬಂದಿಯಿಂದ ಮಸಾಜ್ ಮಾಡಿಸಿಕೊಂಡು ಅಮಾನತಾಗಿದ್ದರುವುದು ಇಲ್ಲಿ ಉಲ್ಲೇಖನೀಯ.