ಬಂಟ್ವಾಳ ನ 14 : ಇಲ್ಲಿನ ಸರ್ವೀಸ್ ರಸ್ತೆಯ ಕಾಮಗಾರಿಯ ಸಂದರ್ಭದಲ್ಲಿ ರಸ್ತೆಯನ್ನು ಅಗೆದ ಹಾಕಿರುವ ಕಾರಣ ರಸ್ತೆಯ ಬದಿಯಲ್ಲಿದ್ದ ಸುಮಾರು ೧೫೦ಕ್ಕೂ ಹೆಚ್ಚು ದೂರವಾಣಿಯ ಕೇಬಲ್ಗಳು ತುಂಡಾಗಿದ್ದು ಬ್ಯಾಂಕ್ ಸಹಿತ ಇನ್ನಿತರ ಅಂಗಡಿಗಳ ಗ್ರಾಹಕರು ದೂರವಾಣಿ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. ಬ್ಯಾಂಕ್ ವ್ಯವಹಾರಗಳು ಮತ್ತು ಸರಕಾರಿ ಇಲಾಖೆಯ ಅಧಿಕಾರಿಗಳು ನೆಟ್ ವರ್ಕ್ ಸಮಸ್ಯೆಯಿಂದ ಬಳಲುತ್ತಿದ್ದು ಕೆಲಸಗಳು ಬಾಕಿಯಾಗಿವೆ ಎಂದು ದೂರಿದ್ದಾರೆ. ನಿಧಾನಗತಿಯ ಮತ್ತು ಅಸರ್ಮಕವಾದ ಈ ಕಾಮಗಾರಿಯಿಂದ ಜನ ಇನ್ನೆಷ್ಟು ದಿನ ನರಕಯಾತನೆ ಅನುಭವಿಸಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.