ಬಂಟ್ವಾಳ, ಎ18(Daijiworld News/SS): ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮತದಾನ ಬಿರುಸಿನಿಂದ ಸಾಗುತ್ತಿದೆ. ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಶೇಕಡ 32.10ರಷ್ಟು ಮತದಾನ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದ ದಿನ ವಿವಾಹವಾಗಬೇಕಿದ್ದ ನವಜೋಡಿಯೊಂದು ಮತಗಟ್ಟೆಗೆ ಬಂದು ಮತ ಚಲಾಯಿಸಿದ ಪ್ರಸಂಗ ನಡೆದಿದೆ. ಮತದಾನ ಮಾಡಿ ಬಳಿಕ ಮದುವೆಗೆ ತೆರಳಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞಾ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ. ತಮ್ಮ ಮದುವೆ ವಿಧಿ ವಿಧಾನಗಳಿಗೆ ತೆರಳುವ ಮುನ್ನ ತಮ್ಮ ಹಕ್ಕನ್ನು ಚಲಾಯಿಸಿಯೇ ತೆರಳಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದ್ದಾರೆ.
ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.