ಉಡುಪಿ, ಏ 18 (Daijiworld News/MSP): ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ತೃತೀಯ ಲಿಂಗಿಗಳು ಭಾಗವಹಿಸಿ ಸಂತಸಪಟ್ಟರು. ವೋಟ್ ಹಾಕಾಕೋ ಹೋದರೆ ಜನರು ಕೀಳು ದೃಷ್ಟಿಯಿಂದ ನೋಡತಾರೆ. ಧೈರ್ಯ ಮಾಡಿ ಹೋದರೆ ಮಹಿಳೆಯರ ಸಾಲಿನಲ್ಲಿ ನಿಲ್ಲಬೇಕಾ..ಪುರುಷರ ಸಾಲಿನಲ್ಲಿ ನಿಲ್ಲಬೇಕಾ ಎಂಬ ಗೊಂದಲಗಳಿಲ್ಲದೆ ತೃತೀಯ ಲಿಂಗಿಗಳು ಮತ ಚಲಾಯಿಸಿ ಸಂತಸ ಪಟ್ಟರು.
ತೃತೀಯ ಲಿಂಗಿಗಳಾದ ಲಾವಣ್ಯ, ರೇಖಾ, ನಿಶಾ ಎಂಬವರು ಮಣಿಪಾಲದ ರಾಜೀವನಗರದಲ್ಲಿರುವ ಮತಗಟ್ಟೆ 40 ರಲ್ಲಿ ಮತದಾನದ ಸಮಾನಹಕ್ಕಿನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.