ಬೆಳ್ತಂಗಡಿ, ಎ18(Daijiworld News/SS): ಪ್ರಜಾಪ್ರಭುತ್ವ ಹಬ್ಬದ ದಿನ ಎರಡು ಕೈ ಇಲ್ಲದೆ ವಿಶೇಷ ಚೇತನವರಾಗಿದ್ದರೂ ಕೂಡ ಕಾಲಿನಲ್ಲಿ ಮತ ಚಲಾಯಿಸುವ ಮೂಲಕ ಯುವತಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಮೂಲತಃ ಬೆಳ್ತಂಗಡಿಯವರಾದ ಸಬಿತಾ ಮೋನಿಸ್ ಎಂಬ ಯುವತಿ ತಮಗೆ ಎರಡೂ ಕೈಗಳೇ ಇಲ್ಲದಿದ್ದರೂ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ವೋಟ್ ಹಾಕಿ ಮಾದರಿಯಾಗಿದ್ದಾರೆ. ಬೆಳ್ತಂಗಡಿಯ ಗರ್ಡಾಡಿಯ ಬೂತ್ನಲ್ಲಿ ಇವರು ಮತ ಚಲಾಯಿಸಿದ್ದಾರೆ.
ಈ ವೇಳೆ ಅಧಿಕಾರಿಗಳು ಸಬಿತಾ ಕಾಲಿನ ಬೆರಳಿಗೇ ಇಂಕ್ ಹಾಕಿದ್ದಾರೆ.
ಲೋಕಸಭಾ ಚುನಾವಣೆಗೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಆಯಾ ಜಿಲ್ಲಾಡಳಿತ ಮತದಾನ ಜಾಗೃತಿ ಅಭಿಯಾನ ನಡೆಸಿವೆ. ಮತದಾನದ ಮಹತ್ವವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿವೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಮತದಾನದ ಮಹತ್ವವನ್ನು ಎಲ್ಲಾ ರೀತಿಯಲ್ಲೂ ಸಾರುವಂತೆ ಚಿತ್ರಣ ಕಂಡುಬಂದಿದೆ.