ಮಂಗಳೂರು, ಏ 18(Daijiworld News/MSP): ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ, ಜಿಲ್ಲೆಯಲ್ಲಿ ನೇರಾನೇರ ಪೈಪೋಟಿ, ಜತೆಗೆ ಸ್ವೀಪ್ ಯೋಜನೆ ಅನುಷ್ಠಾನದ ಪರಿಣಾಮ ಈ ಎಲ್ಲದರ ನಡುವೆ ಮತ್ತೆ ದಾಖಲೆ ಬರೆಯುತ್ತ ದಾಪುಗಾಲು ಹಾಕಿದ ದಕ್ಷಿಣ ಕನ್ನಡ.
ಹೌದು 4ರಿಂದ 5 ಗಂಟೆವರೆಗೆ 72.3 ಶೇಕಡವಾರು ಮತದಾನ ಜಿಲ್ಲೆಯ ಲ್ಲಿ ಆಗಿದೆ. ಒಂದು ವೇಳೆ ಬಾಕಿ ಇನ್ನುಳಿದ ಸಮಯದಲ್ಲಿ ಶೇಕಾಡ 6% ಮತದಾನ ಆದರೂ ಅದು ಜಿಲ್ಲೆಯ ಪಾಲಿಗೆ ಮತ್ತೊಂದು ದಾಖಲೆ ಆಗಲಿದೆ.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನ 4-5 ಗಂಟೆ ವೇಳೆಗೆ ಒಟ್ಟಾರೆ ಶೇ.72.03ರಷ್ಟು ಮತದಾನ ಆಗಿದೆ. ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.75.82ರಷ್ಟು, ಮೂಡಬಿದಿರೆ ವಿಧಾನಸಭೆ ಕ್ಷೇತ್ರದಲ್ಲಿ ಶೇ.71.03ರಷ್ಟು, ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ 71, ಮಂಗಳೂರು ದಕ್ಷಿಣದಲ್ಲಿ ಶೇ.65.17ರಷ್ಟು, ಮಂಗಳೂರು ಕ್ಷೇತ್ರದಲ್ಲಿ 60ರಷ್ಟು, ಬಂಟ್ವಾಳ ವಿಧಾನಸಭೆ ಕ್ಷೇತ್ರದಲ್ಲಿ 75.65ರಷ್ಟು, ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ 77.64ರಷ್ಟು ಹಾಗೂ ಸುಳ್ಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 74.34ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.