ಮಂಗಳೂರು, ಏ 18(Daijiworld News/SM): ಲೋಕಸಭೆಗೆ ಏಪ್ರಿಲ್ 18ರ ಗುರುವಾರ ರಾಜ್ಯದಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಜಿಲ್ಲೆಯಲ್ಲಿ ಈ ಬಾರಿ ದಾಖಲೆಯ ಮತದಾನ ನಡೆದಿದೆ.
ಈ ದಿನದ ಅಂತ್ಯಕ್ಕೆ ಸದ್ಯದ ಮಾಹಿತಿ ಪ್ರಕಾರ 77.70 ಶೇಕಡಾ ಮತದಾನ ನಡೆದಿದೆ. ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಸಾಧಾರಣ ಗತಿಯಲ್ಲಿ ಮತದಾನ ನಡೆದಿತ್ತು. ಮಂಗಳೂರು ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ನಿಧಾನ ಗತಿಯಲ್ಲಿ ಮತದಾನ ನಡೆದಿತ್ತು. ದಿನದಂತ್ಯಕ್ಕೆ ಜಿಲ್ಲೆಯಲ್ಲಿ 77.70 ಶೇಕಡಾ ಮತದಾನವಾಗಿದ್ದು, ಈ ಬಾರಿಯ ಮತ ಚಲಾವಣೆ ದಾಖಲೆಯಾಗಿದೆ.
ಇನ್ನು 2014ರಲ್ಲಿ ನಡೆದಿದ್ದ ಲೋಕ ಸಮರದಲ್ಲಿ ಸುಮಾರು ಶೇಕಡಾ 77.17 ಮತದಾನ ನಡೆದಿತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತ ಚಲಾವಣೆಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಗೆ ನಡೆದ ಶೇಕಡಾವಾರು ಮತದಾನ:
1. ಸುಳ್ಯ- 84.16%
2. ಬೆಳ್ತಂಗಡಿ - 80.92%
3. ಪುತ್ತೂರು - 82.30%
4. ಬಂಟ್ವಾಳ - 80.31%
5. ಮಂಗಳೂರು - 75.49%
6. ಮಂಗಳೂರು ಉತ್ತರ - 75.86%
7. ಮೂಡುಬಿದಿರೆ - 75.96%
8. ಮಂಗಳೂರು ದಕ್ಷಿಣ - 69.46%