ಮಂಗಳೂರು,ಏ 18(Daijiworld News/): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರಿಗೆ ದ.ಕ. ಜಿಲ್ಲಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ರವರು ಇಂದು ಕೃತಜ್ಞತೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿಗಳು,2019ರ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ ಮತದಾರರು ಶಾಂತಿಯುತವಾಗಿ ಮತದಾನ ನಡೆಸಿದ್ದಾರೆ. ಹಾಗೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇಕಡಾ 77.70 ರಷ್ಟು ಮತದಾನ ನಡೆದಿದ್ದು,ಜಿಲ್ಲೆಯ ಮತದಾರರು ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದರು ಎಂದರು.
ಮತದಾನದ ಸಂದರ್ಭದಲ್ಲಿ ಒಟ್ಟು 16 ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, 38 ವಿವಿಪ್ಯಾಟ್ಗಳಲ್ಲಿ ತಾಂತ್ರಿಕ ದೋಷ ತಕ್ಷಣವೇ ಬದಲಾಯಿಸಲಾಗಿದೆ. ಅಲ್ಲದೆ ಇನ್ನು ಕಂಟ್ರೋಲ್ ರೂಮ್ನಿಂದ ಬರುತ್ತಿದ್ದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಿದ್ದು, ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿದ ಎಲ್ಲಾ ಮತದಾರರಿಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಸಸಿಕಾಂತ್ ರವರು ಕೃತಜ್ಞತೆ ಸಲ್ಲಿಸಿದ್ದಾರೆ.