ಬಂಟ್ವಾಳ,ಏ 19(Daijiworld News/MSP): ಬಂಟ್ವಾಳ ವೃತ್ತದ ವಿಟ್ಲ ಪೋಲೀಸ್ ಠಾಣೆಯ ಎಸ್.ಐ. ಯಲ್ಲಪ್ಪ ಅವರು ಮದುವೆಯ ಮರುದಿನವೇ ಚುನಾವಣೆ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆದ ಘಟನೆ ನಡೆದಿದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಲ್ಲಪ್ಪ ಮೂಲತಃ ಅನಮಟ್ಟಿಯವರು. ಆದರೆ ಕರ್ತವ್ಯ ಮಾತ್ರ ವಿಟ್ಲ ಠಾಣೆಯಲ್ಲಿ ಇವರ ವಿವಾಹವೂ ದಾವಣಗೆರೆಯ ಅನಮಟ್ಟಿಯಲ್ಲಿ ಏ.10 ರಂದು ಅಮೃತಾ ಅವರೊಂದಿಗೆ ನೆರವೇರಿತ್ತು. ಏ. 11 ,ರಂದು ಯಲ್ಲಪ್ಪ ಅವರ ಮನೆಯಲ್ಲಿ ಅರತಕ್ಷತೆ ಕಾರ್ಯಕ್ರಮ ನಡೆಯಿತು.
ಆದರೆ ಅರತಕ್ಷತೆ ಕಾರ್ಯಕ್ರಮ ತಕ್ಷಣ ಅಂದೇ ವಿಟ್ಲ ಕ್ಕೆ ವಾಪಸಾಗಿ ಬೆಳಿಗ್ಗೆ ಕರ್ತವ್ಯ ಕ್ಕೆ ಹಾಜರಾಗಿದ್ದಾರೆ. ಚುನಾವಣೆಯ ಈ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಲೇಬೇಕಾಗಿರುವ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯ ಕ್ಕೆ ಹಾಜರಾಗಿ ನಿಷ್ಠೆ ಮೆರೆದಿದ್ದಾರೆ.
ಚುನಾವಣೆ ಗುರುವಾರ ಮುಗಿದಿದ್ದು ಮತ್ತೆ ರಜೆಯಲ್ಲಿ ಇವರು ತೆರಳಲಿದ್ದಾರೆ.ಮದುವೆ ಕಾರ್ಯಕ್ರಮ ಮುಗಿದ ಕೂಡಲೇ ಕರ್ತವ್ಯ ಕ್ಕೆ ಹಾಜರಾಗಿ ಮೇಲಾಧಿಕಾರಿಗಳಿಂದಲೂ ಶಹಬ್ಬಾಸ್ ಗಿರಿ ಪಡೆದಿದ್ದಾರೆ.