ಮಂಗಳೂರು,ಏ20(Daijiworld News/AZM):ನಗರದ ಪೊಲೋ ಸೇಲ್ ಬಟ್ಟೆ ಮಳಿಗೆ ಮೇಲೆ ದಾಳಿ ಹಾಗೂ ಮಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಇಂದು ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ 7 ವರ್ಷ ಜೈಲು ವಾಸ ಹಾಗೂ ದಂಡ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಇರ್ಫಾನ್, ಮಹಮ್ಮದ್ ಮುಸ್ತಕ್, ಶಮೀರ್ ಕೆಎಂ, ಮಹಮ್ಮದ್ ಇರ್ಫಾನ್, ದಿಲನ್ ಅವಿನಾಶ್ ಕರ್ಡೋಝ ವಿರುದ್ಧ ತೀರ್ಪು ನೀಡಿದ ನ್ಯಾಯಾಲಯ 7 ವರ್ಷ ಜೈಲು ವಾಸ ಹಾಗೂ ದಂಡ ವಿಧಿಸಿದೆ.
2015ರಲ್ಲಿ ಮಂಗಳೂರಿನ ಪೋಲೋ ಸೇಲ್ ಬಟ್ಟೆ ಮಳಿಗೆಗೆ ದಾಳಿ ನಡೆಸಿ ಮಾಲಕ ಕನ್ಹಯ್ಯ ಲಾಲ್ ಮೇಲೆ ಹಲ್ಲೆ ನಡೆಸಲಾಗಿತ್ತು.