ಮಂಗಳೂರು, ನ 15: ಜಿಲ್ಲಾ ಉಸ್ತುವರಿ ಸಚಿವ ರಮಾನಾಥ್ ರೈ ವಿರುದ್ದ ಮತ್ತೆ ಹರಿಕೃಷ್ಣ ಬಂಟ್ವಾಳ ಭೂಕಬಳಿಕೆ ಆರೋಪ ಮಾಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಸೂಕ್ತ ತನಿಖೆ ನಡೆಸಬೇಕು ಒತ್ತಾಯಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಸರ್ವೇ ನಂ 97/1ಯಲ್ಲಿರುವ 28 ಎಕ್ರೆ ಸರ್ಕಾರಿ ಜಾಗದಲ್ಲಿ 10 ರೈ ಸ್ವಾದೀನ ಮಾಡಿಕೊಂಡು ರಬ್ಬರ್ ಗಿಡ ಬೆಳೆಸಿದ್ದಾರೆ . ಈ ಅಕ್ರಮದ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಈ ವಿಚಾರವಾಗಿ ನ 17 ರಂದು ಜಿಲ್ಲೆಗೆ ಆಗಮಿಸುವ ಲೋಕಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದರು. ಅಲ್ಲದೆ ಸರ್ಕಾರದಿಂದ ಸುಮಾರು 67.99 ಲಕ್ಷ ಪ್ರಯಾಣ ವೆಚ್ಚವನ್ನು ರೈ ತೆಗೆದುಕೊಂಡಿದ್ದಾರೆ. ಅದರೆ ಅವರು ಖರ್ಚು ಪಡೆದಷ್ಟು ಪ್ರಯಾಣಿಸಿಲ್ಲ ಎಂದು ದೂರಿದರು.