ಮಂಗಳೂರು,ಏ21(Daijiworld News/AZM):ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಂಗಳೂರು ಮೂಲದ ಮಹಿಳೆ ರಝೀನಾ ಮೃತಪಟ್ಟಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾರತದ ಮಹಿಳೆ ದುರ್ಮರಣ ಹೊಂದಿದ್ದು, ಅವರು ತಮ್ಮ ಪತಿ ಖಾದರ್ ಜೊತೆ ಸಂಬಂಧಿಕರ ಮನೆಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಖಾದರ್ ಅವರು ಇಂದು ಶ್ರೀಲಂಕಾದಿಂದ ದುಬೈ ತೆರಳಿದ್ದು, ರಝೀನಾ ತಮ್ಮ ಸಂಬಂಧಿಕರ ಜೊತೆ ರೆಸ್ಟೋರೆಂಟಲ್ಲಿ ಇದ್ದಾಗ ಬಾಂಬ್ ಸ್ಪೋಟ ನಡೆದಿದೆ.