ಉಡುಪಿ, ಎ22(Daijiworld News/SS): ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಬೋಟಿನಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಯಾಧವ ಬೈರಾ ಮೋಗೇರ (31) ಎಂದು ಗುರುತಿಸಲಾಗಿದೆ.
ಶಿವಸಂಗಮ ಎಂಬ ಟ್ರೋಲ್ ಬೋಟಿನಲ್ಲಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಬೋಟಿನಲ್ಲಿ ಕಲಾಸಿ ಕೆಲಸ ಮಾಡಿಕೊಂಡಿದ್ದ ಯಾಧವ ಮೀನುಗಾರಿಕೆಗೆ ಬಲೆಯನ್ನು ತಯಾರು ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.