ಕಾಸರಗೋಡು ನ 15 : ಆಧುನಿಕ ಮೊಬೈಲ್ ಟವರ್ ಗಳ ವಿಕಿರಣ ಹಾಗೂ ಇನ್ನಿತರ ಆರೋಗ್ಯಕಾರಕ ಸಮಸ್ಯೆಯಿಂದ ಪಕ್ಷಿ ಪ್ರಪಂಚ ನಮ್ಮಿಂದ ದೂರಾಗುತ್ತಿದೆ ಎನ್ನುವ ಕೊರಗು ಒಂದೆಡೆಯಾದರೆ ಇನ್ನೊಂದೆಡೆ ಇಂತಹ ಪಕ್ಷಿಗಳನ್ನು ಗುರುತಿಸಿ ಬದುಕಲು ಅವಕಾಶ ಮಾಡಿಕೊಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ ಇದುವೇ ಕಿದೂರಿನ ಪಕ್ಷಿ ಪ್ರಪಂಚದ ಪ್ರಾಯೋಗಿಕ ಸಾಧನೆಗೆಶ್ಲಾಘನೆ ಪಾತ್ರವಾಗುತ್ತಿದೆ.
ಕುಂಬಳೆ ಗ್ರಾ ಮ ಪಂಚಾಯತ್ ಗೊಳಪಟ್ಟ ಕಿದೂರು ಗ್ರಾಮೀಣ ಪ್ರದೇಶ ಇಲ್ಲಿ ಕೆಲವು ವಿಶೇಷ ಜಾತಿಯ ಪಕ್ಷಿಗಳು ಕಂಡು ಬಂದಿರುವುದರಿಂದ ಇದನ್ನು ಗಮನಿಸಿದ ಸಮಾನ ಮನಸ್ಕರಾದ ಪಕ್ಷಿ ಪ್ರಿಯರು ಒಂದಾಗಿ ಪಕ್ಷಿಗಳನ್ನು ಗುರುತಿಸುವ ಹಾಗೂ ಪರಿಚಯಿಸುವ ಕಾರ್ಯಕ್ಕಿಳಿದರು. ಇದರ ಪ್ರಾಯೋಗಿಕ ಪ್ರಯತ್ನವೇ “ಬರ್ಡ್ಸ್ ಫೆಸ್ಟ್" ರಾಷ್ಟ್ರದ ಪ್ರಸಿದ್ದ ಪಕ್ಷಿ ವೀಕ್ಷಕ ಡಾ.ಸಲೀಂ ಅಲಿಯವರ ಜನ್ಮದಿನಾಚರಣೆಯ ಅಂಗವಾಗಿ ಕುಂಬಳೆ ಸಮೀಪದ ಕಿದೂರಿನಲ್ಲಿ ಎರಡು ದಿನಗಳ ಕಾರ್ಯಗಾರ ಬರ್ಡ್ಸ್ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು.
ನೇಚರ್ ತಂಡದ ಯುವಕರು,ಪೆರ್ಲ ಶಾಲೆಯ ನೇಚರ್ ಕ್ಲಬ್ಬಿನ ಮಕ್ಕಳು, ಬೇಳ ಸಂತ ಬಾರ್ತಲೋಮಿಯ ಶಾಲೆಯ ಎಕೋ ಕ್ಲಬ್ಬಿನ ಸದಸ್ಯರು ಹಾಗೂ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಪಕ್ಷಿ ಪ್ರೇಮಿ ತಂಡದ ಮಂದಿ ಪಾಲ್ಗೊಂಡ “ಬರ್ಡ್ಸ್ ಫೆಸ್ಟ್” ಪಕ್ಷಿ ನಿರೀಕ್ಷಕರಿಗೆ ಒಟ್ಟು 57 ಪಕ್ಷಿಗಳನ್ನು ಪರಿಚಯಿಸಿತು.
ಕೇರಳದ ಹಿರಿಯ ಪಕ್ಷಿ ನಿರೀಕ್ಷಕರಾದ ಕಣ್ಣೂರಿನ ಶಶಿಧರ್ ಮನ್ನೆಕ್ಕರ ಜಲಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಪೊಸಡಿಗುಂಪೆಯ ಪ್ರಶಾಂತ್ ಕುಮಾರ್ ಜೀವವೈವಿಧ್ಯತೆಯ ಕುರಿತು ಮಾತನಾಡಿದರು.
ಶಿಬಿರದ ಸಂಧರ್ಭದಲ್ಲಿ ಹಮ್ಮಿಕೊಂಡ ಪಕ್ಷಿ ನಿರೀಕ್ಷಣೆಯಲ್ಲಿ ಬೂಟೆಡ್ ಈಗಲ್ ಹಾಗೂ ಬ್ರೌನ್ ಶೈಕ್ ಎಂಬ ಪಕ್ಷಿಗಳನ್ನು ಹೊಸದಾಗಿ ಪತ್ತೆ ಹಚ್ಚಿದುದರಿಂದ ಕಿದೂರು ಪಕ್ಷಿ ಪ್ರಪಂಚದ ಪಟ್ಟಿಯು 149ಕ್ಕೆ ತಲುಪಿತು. ಸಾಮಾಜಿಕ ಅರಣ್ಯ ಇಲಾಖೆ ಕಾಸರಗೋಡು ವಿಭಾಗದ ಜೊತೆಗೂಡಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುನಿಲ್, ಸತ್ಯನ್ ಹಾಗೂ ಬಿಜುಮೋನ್ ಮಾರ್ಗದರ್ಶನ ನೀಡಿದರು.ವನ್ಯ ಜೀವಿಗಳ ಫೋಟೋ ಪ್ರದರ್ಶನವನ್ನು ಸಹ ಕರಿಸಿದರು
ಪಕ್ಷಿ ವೀಕ್ಷಣಾ ಕಾರ್ಯಗಾರವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರಿಕಾಕ್ಷ ಕೆ.ಎಲ್. ಉದ್ಘಾಟಿಸ ಪರಿಸರ ನಡಿಗೆ ಹಾಗೂ ಪಕ್ಷಿ ನಿರೀಕ್ಷಣೆಯಲ್ಲೂ ಪಾಲ್ಗೊಂಡು ಎಲ್ಲರ ಮನಗೆದ್ದರು. . ಸುರತ್ಕಲ್ ಕಾಲೇಜಿನ ಪ್ರಾಧ್ಯಾಪಕಿ ಕು.ಲವೀನ ಭಾಗವಹಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಅಂಗಡಿಮೊಗೇರು ಶಾಲೆಯ ರವಿಶಂಕರ್ ಹಾಗೂ ಬೇಳ ಶಾಲೆಯ ಅರಣ್ ಶಿಬಿರ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣ ಬೆಂಬಲ ನೀಡಿದರು. ಕಳತ್ತೂರು ಅಂಗನವಾಡಿ ಸಹಾಯಕಿ ಫ್ಲೋರಾ ಡಿ ಸೋಜ ಗುರುಮೂರ್ತಿ ನಾಯ್ಕಾಪು, ಪ್ರದೀಪ್ ಕಿದೂರು ಹಾಗೂ ಗ್ಲೆನ್ ಕಿದೂರು ನೇತೃತ್ವ ನೀಡಿದ ಶಿಬಿರಕ್ಕೆ ಪರಿಸರ, ಪಕ್ಷಿ ಪ್ರೇಮಿ ಶಿಕ್ಷಕ ರಾಜು ಕಿದೂರು ನಿರ್ದೇಶಕರಾಗಿ ಸಹಕರಿಸಿದರು.