ಕಾಸರಗೋಡು ನ 16 : ಗೃಹಿಣಿ ಶೌಚಾಲಯದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬುಧವಾರ ಅಂಬಲತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪೆಡುವಡ್ಕದಲ್ಲಿ ನಡೆದಿದೆ.ಲೀಲಾ ( 56) ಮೃತಪಟ್ಟವರು .ಕೃತ್ಯಕ್ಕೆ ಸಂಬಂಧಪಟ್ಟಂತೆ ಶಂಕಿತ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಇವರು ಲೀಲಾರ ಮನೆ ರಿಪೇರಿ ಕೆಲಸಕ್ಕೆಂದು ಬಂದಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ .ಬುಧವಾರ ಸಂಜೆ ಲೀಲಾ ರವರ ಪುತ್ರ ಶಾಲೆ ಬಿಟ್ಟು ಮನೆಗೆ ಬಂದಾಗ ತಾಯಿ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಶೌಚಾಲಯದಲ್ಲಿ ಬಿದ್ದಿರುವುದು ಕಂಡು ಬಂದಿದೆ.ಕೂಡಲೇ ಸ್ಥಳೀಯರು ಕಾಞಂಗಾಡ್ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಲೀಲಾ ರವರ ಕುತ್ತಿಗೆಯಲ್ಲಿ ಚಿನ್ನದ ಸರ ನಾಪತ್ತೆಯಾಗಿದೆ. ಇದರಿಂದ ಸಂಶಯಗೊಂಡ ನಾಗರಿಕರು ಲೀಲಾ ರವರ ಮನೆ ದುರಸ್ತಿ ಕೆಲಸಕ್ಕೆ ಬಂದಿದ್ದ ಹೊರ ರಾಜ್ಯ ಕಾರ್ಮಿಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಚಿನ್ನದ ಸರ ಕಳವುಗೈಯ್ಯಲು ಕಳವು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಸಂಶಯಿಸಿದ್ದಾರೆ .ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.