ಉಡುಪಿ, ಎ23(Daijiworld News/SS): ಲೋಕಸಭಾ ಚುನಾವಣ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ಕೆಲಸವನ್ನು ಬದಿಗೊತ್ತಿ ಪ್ರಕೃತಿ ಚಿಕಿತ್ಸೆಗಾಗಿ ಮೂಳೂರಿಗೆ ಆಗಮಿಸಿದ್ದರು. ಇದೀಗ ಚಿಕಿತ್ಸೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ.
ಚುನಾವಣೆ ಬಳಿಕ ಉಡುಪಿ ಬಳಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಶ್ರೀಲಂಕಾ ಸರಣಿ ಸ್ಫೋಟ ಘಟನೆ, ಹಾಗೂ ಅದರಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನಪ್ಪಿರುವುದು ತನ್ನನ್ನು ಘಾಸಿಗೊಳಿಸಿದೆ ಎಂದು ಬೆಂಗಳೂರಿಗೆ ವಾಪಸಾಗಿದ್ದಾರೆ.
ಕಾಪು ಪುರಸಭೆ ವ್ಯಾಪ್ತಿಯ ಮೂಳೂರಿನ ಸಾಯಿರಾಧಾ ಗೆಸ್ಟ್ ಹೌಸ್ನಲ್ಲಿ ಮೂರು ದಿನಗಳ ಕಾಲ ಮೂರು ದಿನಗಳ ಕಾಲ ಪಂಚಕರ್ಮ ಚಿಕಿತ್ಸೆ, ಧ್ಯಾನ, ಯೋಗ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಇದೀಗ ಚಿಕಿತ್ಸೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.