ಹೆಬ್ರಿ,ಏ.23 (Daijiworld News/MSP): ಕಲ್ಲುಗಳನ್ನು ಒಡೆಯಲು ಬಳಸುತ್ತಿದ್ದ ಸ್ಫೋಟಕ ಆಕಸ್ಮಿಕವಾಗಿ ಸ್ಫೋಟಗೊಂಡ ಕಾರಣ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಏ.22ರ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ಸ್ಥಳೀಯ ನಿವಾಸಿ ಪುರುಷ ನಾಯ್ಕ ಎಂದು ಗುರುತಿಸಲಾಗಿದೆ.
ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದೂರು ನಾಲ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ನಿವಾಸಿ ಪುರುಷ ನಾಯ್ಕ ಎಂಬವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಶಿಲೆಕಲ್ಲು ಕೋರೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇವರು ಸೋಮವಾರ ಸಂಜೆ ಕಲ್ಲುಗಳನ್ನು ಒಡೆಯಲು ಸ್ಪೋಟಕ ಬಳಸುತ್ತಿದ್ದಾಗ ನಿರ್ಲಕ್ಷ್ಯದಿಂದಾಗಿ ಹಾಗೂ ಆಕಸ್ಮಿಕವಾಗಿ ಸ್ಫೋಟಗೊಂಡ ಕಾರಣ ಪುರುಷ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈತನಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದ ಕುಂದಾಪುರದ ಏಕನಾಥ್ ಬೋಳಾರ್ ಮತ್ತು ಮೃತಪಟ್ಟ ಪುರುಷ ನಾಯ್ಕ್ ಇವರ ಮೇಲೆ ಏಕ್ಸ್ ಪ್ಲೋಸಿವ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ .