ಉಡುಪಿ,ಏ 23 (Daijiworld News/MSP): ಮುಂದಿನ ವಿಶ್ವಕಪ್ ನಲ್ಲಿ ಫೈನಲ್ ಗೆ ಭಾರತ ಪ್ರವೇಶಿಸಿ ಕಾದಾಡಲಿದೆ ಎಂದು ಭಾರತ ಕ್ರಿಕೆಟ್ ಟೀಮ್ ನ ಮಾಜಿ ನಾಯಕ ಗೋಡೆ ಖ್ಯಾತಿಯ ರಾಹುಲ್ ದ್ರಾವಿಢ್ ಭವಿಷ್ಯ ನುಡಿದಿದ್ದಾರೆ.
ಉಡುಪಿಯ ಮಣಿಪಾಲದಲ್ಲಿ ಏ.23ರ ಮಂಗಳವಾರ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತವರಿನಲ್ಲಿರುವ ಕಾರಣ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡಬಹುದು ಹೀಗಾಗಿ ಭಾರತ ಆಸ್ಟೇಲಿಯಾ ಇಂಗ್ಲೆಂಡ್ ಫೈನಲ್ ಗೆ ಬರಬಹುದು ಆದರೆ ಭಾರತಕ್ಕೆ ವಿಶ್ವಕಪ್ ಗೆಲ್ಲುವ ಅರ್ಹತೆ ಇದೆ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೈಯಕ್ತಿಕ ಬದುಕಿನ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡ ಅವರು, ಮಾಧ್ಯಮ ನನ್ನನ್ನು ಗೋಡೆ ಎಂದು ಕರೆದಾಗ ಸಂತೋಷವಾಗುತ್ತಿತ್ತು. ಆದರೆ ಕಳಪೆ ಪ್ರದರ್ಶನ ನೀಡಿದಾದ ಗೋಡೆ ಕುಸಿಯಿತು ಎಂದು ನಾನು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದೆ. ನಾನು ಕ್ರಿಕೆಟ್ ಆಟಗಾರನಾಗಲು ತಂದೆಗೆ ಕ್ರಿಕೆಟ್ ಬಗಿಗಿನ ಆಸಕ್ತಿ ಕಾರಣ. ನನ್ನನ್ನು ಕ್ರಿಕೆಟ್ ಪಂದ್ಯಾಟಗಳಿಗೆ ಕರೆದೊಯ್ಯುತ್ತಿದ್ದರು. ಮಾತ್ರವಲ್ಲದೆ ರೇಡಿಯೋ ದೂರದರ್ಶನದಲ್ಲಿ ಬರುತ್ತಿದ್ದ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ ನನಗೆ ಕ್ರಿಕೆಟ್ ಪಂದ್ಯಾಟದ ಬಗ್ಗೆ ಆಸಕ್ತಿ ಕೂತೂಹಲ ಹುಟ್ಟಿತು ಎಂದರು.
ಕರಾವಳಿಗೆ ಆಗಮಿಸಿದ್ದ ರಾಹುಲ್ ಮಣಿಪಾಲದಲ್ಲಿ ಮರೆನಾ ಒಳಾಂಗಣ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಬಳಿಕ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು.