ಮಂಗಳೂರು, ನ 15: ರಾಜ್ಯದ ಹಲವೆಡೆ 20 ಮಹಿಳೆಯರಿಗೆ ಸೈನೆಡ್ ಕೊಟ್ಟು ಕೊಲೆಗೈದ ಆರೋಪಿ ಸೀರಿಯಲ್ ಕಿಲ್ಲರ್ ಸೈನೆಡ್ ಮೋಹನ್ ಗೆ ಸುಳ್ಯದ ಸುನಂದಾ ಎಂಬ ಮಹಿಳೆಯ ಕೊಲೆ ಹಾಗೂ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಅಧೀನ ನ್ಯಾಯಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನ ಹೈಕೋರ್ಟ್ ಕಾಯಂಗೊಳಿಸಿ ಬುಧವಾರ ತೀರ್ಪು ನೀಡಿದೆ.
ಗಲ್ಲು ಶಿಕ್ಷೆಯ ರದ್ದು ಕೋರಿ ಆತ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ. ರವಿ ಮಳೀಮಠ್ ಹಾಗೂ ನ್ಯಾ. ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಆರೋಪಿ ಸೈನೆಡ್ ಮೋಹನ್ ನಂತಹ ವ್ಯಕ್ತಿಗಳು ಸಮಾಜಕ್ಕೆ ಕಂಟಕ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆಯ ಕೊಲೆ ಬಗ್ಗೆ ಮೈಸೂರು ಲಾಡ್ಜ್ ಸಿಬ್ಬಂದಿ ಆರೋಪಿಯ ಸಿಬ್ಬಂದಿ ಹೇಳಿಕೆ, ಈತನ ಬಲೆಯಿಂದ ತಪ್ಪಿಸಿಕೊಂಡ ಇಬ್ಬರು ಮಹಿಳೆಯ ಹೇಳಿಕೆ, ಕೊಲೆಯಾದ ಮಹಿಳೆ ಸುನಂದಾ ಅವರ್ ಒಡವೆ ಗಿರವಿ ಇಟ್ಟ ಜುವ್ಯೆಲ್ಯರಿ ಅಂಗಡಿ ಮಾಲೀಕ , ಆತನ ಮನೆಯಲ್ಲಿ ದೊರೆತ ಸೈನೈಡ್ ಗಳು ಹಾಗೂ ಮತ್ತಿತರ ದಾಖಲೆಗಳಿಂದ ಆರೋಪಿಯೇ ಕೊಲೆ ಮಾಡಿದ್ದು ಸಾಬೀತಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅಧೀನ ನ್ಯಾಯಲಯ ವಿಧಿಸಿದ್ದ ಗಲ್ಲು ಶಿಕ್ಷೆಯ ತೀರ್ಪನ್ನು ಎತ್ತಿಹಿಡಿದಿದೆ.
ಸೈನೆಡ್ ಮೋಹನ್ ಮೇಲಿರುವ 20 ಕೊಲೆ ಪ್ರಕರಣದಲ್ಲಿ ಒಂದು ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದಾನೆ. ಇನ್ನು 16 ಪ್ರಕರಣಗಳು ಅಧೀನ ನ್ಯಾಯಲಯದಲ್ಲಿ. ವಿಚಾರಣಾ ಹಂತದಲ್ಲಿದ್ದು ಉಳಿದ ಮೂರು ಕೇಸ್ ನಲ್ಲಿ ಒಂದರಲ್ಲಿ ಗಲ್ಲು ಹಾಗೂ ಉಳಿದೆರೆಡರಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ಹೈಕೋರ್ಟ್ ವಿಧಿಸಿದೆ.