ಕಾರ್ಕಳ, ಜ 31 (DaijiworldNews/MS): ನಗರದ ಅನಂತಪದ್ಮನಾಭ ದೇವಸ್ಥಾನ ಪರಿಸರದ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಕಾರ್ಕಳ ನಗರದ ಹೊಟೇಲ್ ಹಾಗೂ ಬಾರ್ ರೆಸ್ಟೋರೆಂಟ್ ಗಳಲ್ಲಿ ಸಪ್ಲಾಯರ್ ಆಗಿ ದುಡಿಯುತ್ತಿದ್ದ ಆ ವ್ಯಕ್ತಿ ಮೂಡುಬಿದ್ರಿ ಗಣೇಶ್ ಕಾಮತ್ ಎಂದು ಗುರುತಿಸಿಕೊಂಡಿದ್ದರು.
ಸ್ಥಳೀಯರ ಸಹಕಾರದಿಂದ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಅಗಮಿಸಿದ್ದು, ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅದಾಗಲೇ ವ್ಯಕ್ತಿ ಮೃತ ಪಟ್ಟಿರುವುದು ವೈದ್ಯಕೀಯ ಮೂಲಗಳಿಂದ ದೃಢಪಟ್ಟಿದೆ.ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿದ್ದಾರೆ.