ಮಂಗಳೂರು,ಏ 25(Daijiworld News/MSP): ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಪೋಟದ ಬಳಿಕ ಭಾರತದಲ್ಲೂ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಕಾರ್ ಪಾರ್ಕಿಂಗ್ ಬಳಿ ಏ.24 ರ ಬುಧವಾರ ಮಧ್ಯಾಹ್ನ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿ ಎಲ್ಲರೂ ಬೆಚ್ಚಿಬಿದ್ದ ಘಟನೆ ವರದಿಯಾಗಿದೆ.
ಶ್ರೀಲಂಕಾ ದಾಳಿಯ ಹಿನ್ನಲೆ, ಕರಾವಳಿಯ ತೀರಾ ಪ್ರದೇಶ ಸೇರಿದಂತೆ ವಿಮಾನ ನಿಲ್ದಾಣದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಣಿಕರ ತಪಾಸಣೆ ಸೇರಿದಂತೆ ಹಲವಾರು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಕಪ್ಪು ಬ್ಯಾಗ್ ಪಾರ್ಕಿಂಗ್ನ ಬ್ಯಾರಿಕೇಡ್ಗಳ ಮಧ್ಯೆ ಅನಾಥವಾಗಿರುವುದನ್ನು ಕಂಡು ವಿಮಾನ ನಿಲ್ದಾಣದ ಸಿಬ್ಬಂದಿಗಳ ಸಹಿತ ಎಲ್ಲರೂ ಆತಂಕಕ್ಕೆ ಒಳಗಾದರು.
ಅದರೂ, ಅವಸರದಲ್ಲಿ ವಿಮಾನದ ಪ್ರಯಾಣಿಕರ್ಯಾರೋ ಮರೆತು ಹೋಗಿ ಅಲ್ಲಿ ಬಾಕಿಯಾಗಿರಬಹುದು ಅನ್ನೋ ಸಂಶಯವು ಕಾಡತೊಡಗಿತು. ಹಾಗೆಂದು ಬ್ಯಾಗ್ ನ್ನು ಪೂರ್ಣವಾಗಿ ನಿರ್ಲಕ್ಷಿಸುವಂತೆಯೂ ಇರಲಿಲ್ಲ. ಸುಮಾರು ಮುಕ್ಕಾಲು ಗಂಟೆ ಆ ಬ್ಯಾಗ್ ಕಾರ್ ಪಾರ್ಕಿಂಗ್ ಜಾಗದಲ್ಲಿ ಅನಾಥವಾಗಿದ್ದು, ನಂತರ ಸಂಶಯಗೊಂಡು ನಿಲ್ದಾಣದಲ್ಲಿ ಹೀಗಾಗಿ ಮೊದಲು ಬ್ಯಾಗ್ ಇರುವ ಪ್ರದೇಶಕ್ಕೆ ಯಾರು ಕೂಡ ಹೋಗದಂತೆ ಜನರನ್ನು ತಡೆದು ನಂತರ ಸಿಐಎಸ್ಎಫ್ ಸಿಬಂದಿಯು ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದವರನ್ನು ಸ್ಥಳಕ್ಕೆ ಕರೆಸಿ ಬ್ಯಾಗ್ ನ್ನು ತೀವ್ರ ತಪಾಸಣೆ ಮಾಡಿದರು.
ಬ್ಯಾಗ್ ನಲ್ಲಿ ಯಾವುದೇ ಸಂಶಯಾಸ್ಪದ ವಸ್ತು ಇಲ್ಲದಿರುವುದು ತಪಾಸಣೆ ವೇಳೆ ದೃಢಪಟ್ಟಿತು. ಆ ಬಳಿಕ ಬ್ಯಾಗ್ ನ್ನು ಸಿಐಎಸ್ಎಫ್ ಸಿಬ್ಬಂದಿ ನಿಲ್ದಾಣದೊಳಗೆ ಒಯ್ದರು.