ಶಿರಸಿ,ಏ25(Daijiworld News/AZM): ಜಿಲ್ಲೆಯ ಶಿರಸಿಯಲ್ಲಿ ಸ್ನಾನಕ್ಕಾಗಿ ಹೊಳೆಗಿಳಿದ ಇಬ್ಬರು ನೀರಲ್ಲಿ ಮುಳುಗಿ, ಸಾವನ್ನಪ್ಪಿರುವ ಘಟನೆ, ಓಣಿಕೇರಿ ಗ್ರಾಮದ ಬಿಳಚಿಕಟ್ಟು ಬಳಿ ನಡೆದಿದೆ.
ಶಿರಸಿ ತಾಲ್ಲೂಕಿನ, ಓಣಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಬಿಳಚಿಕಟ್ಟು ಬಳಿ, ಶಾಲ್ಮಲಾ ನದಿಯ ಕೆಂಗ್ರೆಹೊಳೆಗೆ ಸ್ನಾನಕ್ಕಾಗಿ ಇಳಿದಿದ್ದರು. ಸ್ನಾನ ಮಾಡುವಾಗ ಆಯತಪ್ಪಿ ಆಳವಾದ ನೀರಿನಲ್ಲಿ ಜಾರಿ ಬಿದ್ದ ಪರಿಣಾಮ, ದಿನೇಶ್ ಮುಳುಗಿದ್ದಾರೆ. ಇವರನ್ನು ರಕ್ಷಿಸಲು ಹೋದ ವಿನಾಯಕ ಕೂಡ ಸಾವನ್ನಪ್ಪಿದ್ದಾರೆ.
ಶಿರಸಿಯ ಕರಾವಳಿ ಹೋಟೆಲ್ ನಲ್ಲಿ, ಕೆಲಸ ಮಾಡುತ್ತಿದ್ದ ಇಬ್ಬರೂ, ಇಂದು ರಜೆ ಇದ್ದ ಕಾರಣ ಸ್ನಾಕ್ಕೆ ಹೊಳೆಗೆ ಹೋಗಿದ್ದರು. ಆದರೇ ದುರಾದೃಷ್ಟವಶಾತ್, ಸ್ನಾನ ಮಾಡುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿರಸಿಯ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಛಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ಕರಣ ದಾಖಲಿಸಿಕೊಂಡಿದ್ದಾರೆ.