ಕಾಸರಗೋಡು, ಏ 26 (Daijiworld News/MSP): ಕಾಸರಗೋಡು ನಗರದ ಪಿಲಿಕುಂಜೆಯಲ್ಲಿರುವ ಹಳೆ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಕಟ್ಟಡದ ಬಾಗಿಲು ಮುರಿದು ಕ್ರೈಮ್ ದಾಖಲೆ ಗಳನ್ನು ಕೊಂಡೊಯ್ದ ಘಟನೆ ಬುಧವಾರ ಬೆಳಕಿಗೆ ಬಂದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನ ಇಬ್ಬರು ಅಲೆಮಾರಿ ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
1999 ರಿಂದ 2002 ರ ನಡುವಿನ ಕ್ರಿಮಿನಲ್ ಕೃತ್ಯಗಳು ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳು ಪಿಲಿಕುಂಜೆಯ ಕಚೇರಿಯಲ್ಲಿ ಇರಿಸಲಾಗಿತ್ತು. ಬುಧವಾರ ಇವುಗಳನ್ನು ಎರಡು ಆಟೋ ರಿಕ್ಷಾಗಳಲ್ಲಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ಕಡತಗಳನ್ನು ಬಾಗಿಲು ಮುರಿದು ಸಾಗಿಸಲು ಅಲೆಮಾರಿ ಯುವತಿಯರನ್ನು ಬಳಸಿಕೊಂಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.