ಕುಂದಾಪುರ ನ 17: ವಾಟ್ಸಪ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅಶ್ಲೀಲ ಚಿತ್ರವನ್ನ ಮತ್ತು ಆಕ್ಷೇಪಾರ್ಹ ಬರಹ ಹಾಕಿದ ಹಿನ್ನೆಲೆ ಬಿಜೆಪಿ ಕುಂದಾಪುರ ಎಂಬ ವಾಟ್ಸಪ್ ಗ್ರೂಪ್ನ ಮೂವರು ಗ್ರೂಪ್ ಅಡ್ಮಿನ್ಗಳ ವಿರುದ್ಧ ದೂರು ದಾಖಲಿಸಿದ ಘಟನೆ ಗುರುವಾರ ನಡೆದಿದೆ.
ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬಿಜೆಪಿ ಕುಂದಾಪುರ ಗ್ರೂಪ್ನ ಅಡ್ಮಿನ್ಗಳಾದ ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಮತ್ತು ಬಿಜೆಪಿ ಮುಖಂಡ ರಾಜು ಪೂಜಾರಿ ವಿರುದ್ಧ ಜಿಲ್ಲಾ ಸೈಬರ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಗ್ರೂಪ್ನಲ್ಲಿ ನಡೆದ ಚರ್ಚೆಗಳೇನು?
ಕುಂದಾಪುರದಲ್ಲಿ ನವಭಾರತ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಜನವರಿ ತಿಂಗಳಿನಲ್ಲಿ ಬಿಜೆಪಿ ಸೆರ್ಪಡೆಗೊಳ್ಳಲಿದ್ದಾರೆ. ಮತ್ತು ಮುಂದಿನ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಿಂದ ಬಿಜೆಪಿ ಲಾಂಚನದಡಿ ಹಾಲಾಡಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದರು. ಈ ಹಿನ್ನೆಲೆ ಹಾಲಾಡಿ ವಿರೋಧಿ ಬಣ ಮತ್ತು ಮೂಲ ಬಿಜೆಪಿಗರನ್ನ ಕೆರಳಿಸಿದ್ದು. ಅಂದು ಈ ವಿಚಾರವನ್ನ ಪ್ರತಿಭಟಿಸಿದ್ದರು. ಆಗ ಬಿಎಸ್ವೈ ಹಾಲಾಡಿ ಶ್ರೀನಿವಾಸ ಶೆಟ್ಟಿಯೇ ಮುಂದಿನ ನಮ್ಮ ನಾಯಕ ಅವರನ್ನ ವಿರೋಧಿಸುವವರು ಸಭೆಯಿಂದ ಎದ್ದು ಹೋಗಿ ಎಂದು ಗುಡುಗಿದ್ದರು. ಇದರಿಂದ ಆಕ್ರೋಶಿತರಾದ ಕೆಲವರು ಬಿಜೆಪಿ ಕುಂದಾಪುರದಲ್ಲಿ ಈ ವಿಚಾರವನ್ನ ಚರ್ಚಿಸಿದ್ದು, ಬಿಎಸ್ವೈ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ಆಕ್ಷೇಪಾರ್ಹ ಮಾತುಗಳಲ್ಲಿ ಬೈದಿದ್ದಾರೆ. ಮತ್ತು ಬಿಎಸ್ವೈ ಮತ್ತು ಶೋಭಾ ಕರಂದ್ಲಾಜೆಯ ಅಸಹ್ಯ ಚಿತ್ರವನ್ನ ಚಿತ್ರಿಸಿ ಈ ವಾಟ್ಸಪ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಪಕ್ಷದ ನಾಯಕರಿಗೆ ಅವಮಾನ ಮಾಡಿದ ಹಿನ್ನೆಲೆ ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಗ್ರೂಪ್ ಅಡ್ಮಿನ್ಗಳು ಮತ್ತು ಹಾಲಾಡಿ ವಿರೋಧಿ ಬಣದ ಮುಂಚೂಣಿ ನಾಯಕರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ ಮತ್ತು ರಾಜ್ ಪೂಜಾರಿ ವಿರುದ್ಧ ದೂರು ದಾಖಲಿಸಿದ್ದಾರೆ.