ಉಡುಪಿ, ಏ 26 (Daijiworld News/SM): ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣ ಹಾಗೂ ಇತ್ತೀಚಿನ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಳಿಸಿದ್ದು, ಈ ಹಿನ್ನಲೆಯಲ್ಲಿ ಡಿಜಿಪಿ ಐಎಸ್ಡಿ ಎ.ಎಂ. ಪ್ರಸಾದ್ ಹಾಗೂ ಎಡಿಜಿಪಿ ಐಎಸ್ಡಿ ಸಿ.ಹೆಚ್ ಪ್ರತಾಪರೆಡ್ಡಿಯವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಕರಾವಳಿಯ ಸಮುದ್ರದಲ್ಲಿ ಇಂಟರ್ಸೆಪ್ಟರ್ ಬೋಟ್ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ, ಕರಾವಳಿ ಕಾವಲು ಪೊಲೀಸ್ ವತಿಯಿಂದ, ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದ ತನಕ ಬಿಗಿ ಭದ್ರತೆ, ಸಮುದ್ರ ತೀರದ ಆಯಾಕಟ್ಟಿನ ಸ್ಥಳಗಳಲ್ಲಿ ಗಸ್ತು ಆರಂಭಿಸಿ, ಯಾವುದೇ ತುರ್ತು ಸಂಧರ್ಭದಲ್ಲಿ ಸನ್ನದ್ಧರಿರುವಂತೆ ಸೂಚನೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಸಿಎಸ್ಪಿ ಪೊಲೀಸ್ ಅಧೀಕ್ಷಕರಾದ ಎನ್.ಟಿ.ಪ್ರಮೋದ್ರಾವ್, ಪ್ರವೀಣ್ ಹೆಚ್ ನಾಯಕ್, ಪೊಲೀಸ್ ಉಪಾಧೀಕ್ಷಕರು ಹಾಗೂ ಎಲ್ಲಾ 9 ಸಿಎಸ್ಪಿ ಠಾಣೆಯ ಠಾಣಾಧಿಕಾರಿಗಳು ಹಾಜರಿದ್ದರು.