ಸುಳ್ಯ, ಏ 27(Daijiworld News/MSP): ಅರಂತೋಡು ಸಮೀಪದ ಕಿರ್ಲಾಯ ಎಂಬಲ್ಲಿ ಏ.27ರ ಶುಕ್ರವಾರ ಸಂಜೆ ಗ್ಯಾಸ್ ವಿತರಣೆಯ ಟಾಟ ಗಾಡಿಗೆ ಆಕಸ್ಮಿಕವಾಗಿ ಬೆಂಕಿ ತಗಲು ಗಾಡಿ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ವರದಿಯಾಗಿದೆ.
ಅರಂತೋಡು ಎಚ್.ಪಿ ಗ್ಯಾಸ್ ಸಿಲಿಂಡರ್ನನ್ನು ತಾಜುದ್ದೀನ್ ಟರ್ಲಿ ಎಂಬವರು ಕಮೀಷನ್ ಆಧಾರದಲ್ಲಿ ತನ್ನ ಗಾಡಿಯಲ್ಲಿ ಮನೆ ಮನೆ ವಿತರಣೆ ಮಾಡುತ್ತಿದ್ದರು. ವಿತರಣೆ ಸಂದರ್ಭದಲ್ಲಿ ಅರಂತೋಡಿನ ಕಿರ್ಲಾಯ ಎಂಬಲ್ಲಿಗೆ ತಲುಪಿದ್ದಾಗ ವಾಹನದಲ್ಲಿ ಹೊಗೆ ಏಳುವುದು ಕಂಡು ಬಂತು. ಗಾಡಿಯನ್ನು ನಿಲ್ಲಿಸಿದ್ದಾಗ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ಅವರು ಅಗ್ನಿ ಶಾಮಕ ದಳವದರಿಗೆ ತಿಳಿಸಿದ್ದಾರೆ. ಮಾಹಿತಿ ದೊರೆತ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲೇ ವಾಹನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ವಾಹನದಲ್ಲಿದ್ದ ಸುಮಾರು 25,000 ರೂ ಹಾಗೂ ಇತರ ದಾಖಲಾತಿಗಳು ಬೆಂಕಿಗೆ ಅಹುತಿಯಾಗಿದೆ.
ಮಾತ್ರವಲ್ಲದೆ ಮೂರು ಸಿಲಿಂಡರ್ನಲ್ಲಿ ತಂಬಲ್ಪಟ್ಟ ಗ್ಯಾಸ್ ಇದ್ದು. ಉಳಿದವು ಸಿಲಿಂಡರ್ ಖಾಲಿಯಾಗಿತ್ತು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.