ಮಂಗಳೂರು, ಎ28(Daijiworld News/SS): ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ಪ್ರೆಸ್ ರೈಲು ಕೊಂಕಣ ರೈಲ್ವೇಯಲ್ಲಿ ಸುರತ್ಕಲ್ ಸಮೀಪದ ತೋಕೂರಿನಿಂದ ಮಹಾರಾಷ್ಟ್ರದ ರೋಹಾವರೆಗಿನ ಒಟ್ಟು 741 ಕಿ.ಮೀ. ಮಾರ್ಗದ ವಿದ್ಯುದೀಕರಣ ನಡೆಯುತ್ತಿದ್ದು, ಮೈಸೂರು- ಮಂಗಳೂರು ನಡುವೆ ವಿದ್ಯುದೀಕರಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು - ಮಂಗಳೂರು ನಡುವೆ ವಿದ್ಯುದೀಕರಣ ಯೋಜನೆಯ ಈ ಕಾಮಗಾರಿ 2 ಹಂತದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಶೀಘ್ರ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಹೊಂದಲಾಗಿದೆ. ಬೆಂಗಳೂರಿನಿಂದ ಮೈಸೂರುವರೆಗೆ ರೈಲು ಮಾರ್ಗ ಈಗಾಗಲೇ ವಿದ್ಯುದೀಕರಣಗೊಂಡಿದ್ದು, ಅಲ್ಲಿಂದ ಮಂಗಳೂರುವರೆಗಿನ ಸುಮಾರು 310 ಕಿ.ಮೀ. ಮಾರ್ಗ ಬಾಕಿಯಿದೆ. ಈ ಪೈಕಿ ಮಂಗಳೂರು-ಹಾಸನ ವಿದ್ಯುದೀಕರಣಕ್ಕೆ ಮೊದಲ ಹಂತದ ಮಂಜೂರಾತಿ ದೊರಕಿದೆ ಎಂದು ಹೇಳಲಾಗಿದೆ.
ಮಂಗಳೂರಿನ ಪಡೀಲ್ನಿಂದ ಬಂಟ್ವಾಳ, ಕಬಕ ಪುತ್ತೂರು, ಎಡಮಂಗಲ, ಸುಬ್ರಹ್ಮಣ್ಯ ಘಾಟಿ, ಸಕಲೇಶಪುರ-ಹಾಸನ ಹಳಿಯು ವಿದ್ಯುದೀಕರಣಗೊಳ್ಳಬೇಕಿದೆ.
ಈಗಾಗಲೇ ಕೇಂದ್ರ ಬಜೆಟ್ನಲ್ಲಿ ಮೈಸೂರು- ಹಾಸನ-ಮಂಗಳೂರು ಮಾರ್ಗ ವಿದ್ಯುದೀಕರಣಕ್ಕೆ 316 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಮೊದಲ ಹಂತದಲ್ಲಿ ಮಂಗಳೂರು ಹಾಸನ ನಡುವೆ ಕಾಮಗಾರಿ ಆರಂಭವಾಗಲಿದೆ. ಬಳಿಕ ಹಾಸನ-ಮೈಸೂರು ಕೆಲಸ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಫೆ.21ರಿಂದ ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು ಈ ಮಾರ್ಗದ ವಿದ್ಯುದೀಕರಣದ ಅಂತಿಮ ತೀರ್ಮಾನ ಪ್ರಕಟಗೊಳ್ಳಬೇಕಿದೆ.
ರೈಲ್ವೇ ಇಲಾಖೆಯ ಅಲಹಾಬಾದ್ನ ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ ವಿಭಾಗವು ಈ ಕಾಮಗಾರಿಯನ್ನು ನಿರ್ವಹಿಸಲಿದ್ದು, ಸದ್ಯ ಸರ್ವೆ ನಡೆಸಿ ಪ್ರಾರಂಭಿಕ ಸಿದ್ಧತೆ ಕೈಗೊಳ್ಳುತ್ತಿದೆ.