ಪುತ್ತೂರು, ನ 17: ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಹಠಮಾರಿ ಧೋರಣೆಗೆ ಪುತ್ತೂರಿನ ವಿದ್ಯಾರ್ಥಿನಿಯೋರ್ವಳು ಬಲಿಯಾಗಿದ್ದಾಳೆ.
ಕಬಕ ವಿದ್ಯಾಪುರ ನಿವಾಸಿಯಾದ ಪೂಜಾ ಮೃತಪಟ್ಟವರು.ಪುತ್ತೂರು ವಿವೇಕಾನಂದ ಕಾಲೇಜಿನ ದ್ವೀತಿಯ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ಪುತ್ತೂರಿನ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ಡಯಾಲಿಸೀಸ್ ಮುನ್ನ ವೈದ್ಯಕೀಯ ಮಂಗಳೂರಿನ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಹೇಳಿದ್ದರು. ಹೀಗಾಗಿ ಪೋಷಕರು ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರ ಮುಷ್ಕರದ ಹಿನ್ನೆಲೆ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಇದರಿಂದ ಆಕೆ ಮನೆಗೆ ವಾಪಾಸಾಗಿದ್ದಳು. ಬಳಿಕ ರೋಗ ಉಲ್ಬಣಿಸಿ ಆಕೆ ಮೃತಪಟ್ಟಿದ್ದಾರೆ.