ಮಂಗಳೂರು, ಎ30(Daijiworld News/SS): ನಿರೀಕ್ಷಿತ ಎಸ್ಎಸ್ಎಲ್ಸಿ ಫಲಿತಾಂಶ ಮಂಗಳವಾರ ಬೆಳಗ್ಗೆ ಪ್ರಕಟವಾಗಿದ್ದು ಶೇಕಡಾ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಆನೇಕಲ್ನಸೆಂಟ್ ಫಿಲೋಮಿನಾ ಶಾಲೆಯ ಸೃಜನಾ ಡಿ. ಮತ್ತು ಕುಮಟಾದ ನಾಗಾಂಜಲಿ ನಾಯಕ್ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮೀ 624, ಸುಳ್ಯದ ಕುಮಾರಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಕೃಪಾ 624, ಬಂಟ್ವಾಳದ ಶ್ರೀವೆಂಕಟರಮಣ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ 624, ವಿಟ್ಲ ಜೆ.ಸಿ ಶಾಲೆಯ ಚಿನ್ಮಯಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಾಸನ ಮೊದಲ ಸ್ಥಾನ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ, ಉತ್ತರಕನ್ನಡ ನಾಲ್ಕನೇ ಸ್ಥಾನ, ಉಡುಪಿ 5 ನೇ ಸ್ಥಾನ, ಚಿಕ್ಕೋಡಿ 6 ನೇ ಸ್ಥಾನ ಪಡೆದಿದೆ.